ವಿವಿಧೆಡೆ ವಿದ್ಯುತ್ ವ್ಯತ್ಯಯ

Power Cut
Published on

ಶ್ರವಣಬೆಳಗೊಳ: ಹೋಬಳಿಯ ಮಂಜುನಾಥಪುರ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣೆ ಕೈಗೊಂಡಿರುವುದರಿಂದ ಡಿ.7ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ.

ಮಂಜುನಾಥಪುರ, ಅರುವನಹಳ್ಳಿ, ಕೊತ್ತನಘಟ್ಟ, ದಮ್ಮನಿಂಗಳ, ಡಿಂಕ, ಡಿ.ಹೊನ್ನೇನಹಳ್ಳಿ, ಮಾರೇನಹಳ್ಳಿ, ಡಿ.ಸಾತೇನಹಳ್ಳಿ, ಸಾಣೇನಹಳ್ಳಿ, ಕೋರೇನಹಳ್ಳಿ, ಕುಂಭೇನಹಳ್ಳಿ, ಬೆಟ್ಟದಹಳ್ಳಿ, ದಡಿಘಟ್ಟ, ಶ್ರವಣಬೆಳಗೊಳ ಕೇಂದ್ರ ವ್ಯಾಪ್ತಿಯ ಎಫ್-1 ಶ್ರವಣಬೆಳಗೊಳ, ಎಫ್-8 ಆಲದಹಳ್ಳಿ ಮತ್ತು ಎಫ್-9 ಡಿಂಕ 11 ಕೆವಿ ಮಾರ್ಗಗಳಲ್ಲಿ ಬರುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಚನ್ನರಾಯಪಟ್ಟಣ ಸೆಸ್ಕ್ ಉಪ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net