

ಕುಂಬಳೆ: ಶುಚಿ- ರುಚಿಯಾದ ಆಹಾರ ಆರೋಗ್ಯಕ್ಕೆ ಪೂರಕ. ಆಹಾರದಲ್ಲಿ ಔಷಧೀಯ ಗುಣವಿದ್ದರೆ ರೋಗರುಜಿನಗಳಿಂದ ದೂರವಿರಬಹುದು ಎಂದು ಮಂಗಳೂರು ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಂಶುಪಾಲ ಡಾ.ಸಂದೀಪ್ ಬೇಕಲ್ ಹೇಳಿದರು.
ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಜಿಲ್ಲಾ ಮಹಿಳಾ ಸಂಘದ ಸಹಯೋಗದೊಂದಿಗೆ ಬೀರಂತಬೈಲಿನ ಲಲಿತಕಲಾ ಸದನದಲ್ಲಿ ಆಯೋಜಿಸಿದ ‘ಶ್ರಾವಣ ಸಂಭ್ರಮ- ಕೋಟೆ ಸವಿರುಚಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಹಿರಿಯ ಸದಸ್ಯರಾದ ಕೋದಂಡರಾಜ್ ಬೇಕಲ್ ದಂಪತಿ ಉದ್ಘಾಟಿಸಿದರು. ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ಮತ್ತ ಮುದಿಯಕ್ಕಾಲ್ ಶ್ರೀ ಕಾಲಬೈರವ ದೇವಸ್ಥಾನ ಅಧ್ಯಕ್ಷ ರಾಜೇಶ್ ಬೇಕಲ್, ಮಂಗಳೂರಿನ ನಿವೃತ್ತ ಶಿಕ್ಷಕಿ ಉಮಾಗೌರಿ ಶುಭಹಾರೈಸಿದರು. ಜಿಲ್ಲಾ ಸಂಘ ಅಧ್ಯಕ್ಷ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ನಿರಂಜನ ಕೊರಕ್ಕೋಡು, ಕೋಶಾಧಿಕಾರಿ ಸತೀಶ್ ಕೂಡ್ಲು, ಮಹಿಳಾ ಸಂಘ ಗೌರವಾಧ್ಯಕ್ಷೆ ಆಶಾ ರಾಧಾಕೃಷ್ಣ, ಅಧ್ಯಕ್ಷೆ ಉಷಾ ಪಾರೆಕಡವು ಉಪಸ್ಥಿತರಿದ್ದರು. ಕೋಟೆಯವರ ಸಾಂಪ್ರದಾಯಿಕ ಆಹಾರದ ಪ್ರದರ್ಶನ ಏರ್ಪಡಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಅಣಂಗೂರು ಸ್ವಾಗತಿಸಿದರು. ಉಪಾಧ್ಯಕ್ಷ ಜಗದೀಶ್ ಕೂಡ್ಲು, ಶಿವರಾಮ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಸಂಘದ ಕಾರ್ಯದರ್ಶಿ ಉಪಾಕಿರಣ್ ಅಣಂಗೂರು ವಂದಿಸಿದರು.