ಶ್ರೀ ಮಹಾಬಲೇಶ್ವರನಿಗೆ ಶ್ರಾವಣ ಪೂಜೆ

12gkn2 MAHABALESWARA POOJE
Published on

ಗೋಕರ್ಣ: ಶ್ರಾವಣ ಸೋಮವಾರದ ನಿಮಿತ್ತ ಪುರಾಣ ಪ್ರಸಿದ್ಧ ಶ್ರೀಮಹಾಬಲೇಶ್ವರ ಮಂದಿರದಲ್ಲಿ ಪ್ರಾತಃ ಕಾಲದಲ್ಲಿ ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಪೂಜೆ ನಿಮಿತ್ತ ಶ್ರೀ ದೇವರ ನಾಗಾಭರಣಕ್ಕೆ ವಿವಿಧ ಪುಷ್ಪಗಳ ಸರ್ವಾಲಂಕಾರ ಮಾಡಲಾಗಿತ್ತು. ಮಂದಿರದ ಅರ್ಚಕ ವೇ. ಅಮೃತೇಶ ಹಿರೇ ನೇತೃತ್ವದಲ್ಲಿ ಜರುಗಿದ ಶ್ರಾವಣ ವಿಶೇಷದಲ್ಲಿ ಕ್ಷೇತ್ರದ ವೈದಿಕ ಉಪಾಧಿವಂತರು ಪಾಲ್ಗೊಂಡರು.

ಯಾತ್ರಿಕರ ಅಭಾವ: ಮಳೆ ಕ್ಷೀಣವಾಗಿದ್ದರೂ ಸೋಮವಾರದ ವಿಶೇಷ ಪೂಜೆಗೆ ಭಕ್ತರ ಅಭಾವ ಕಂಡು ಬಂತು. ಪ್ರತಿ ವರ್ಷ ಶ್ರಾವಣ ಸೋಮವಾರ ಸಾವಿರಾರು ಸಂಖ್ಯೆಯಲ್ಲಿ ವಿವಿಧ ರಾಜ್ಯಗಳ ಭಕ್ತರು ಆಗಮಿಸಿ ಆತ್ಮಲಿಂಗ ಪೂಜೆ ಕೈಗೊಳ್ಳುತ್ತಿದ್ದರು. ಆದರೆ, ಈ ವರ್ಷ ಸುರಿದ ಅಪಾಯಕಾರಿ ಮಳೆ ಮತ್ತು ಹೆದ್ದಾರಿಗಳಲ್ಲಿನ ಗುಡ್ಡ ಕುಸಿತದ ಅಪಾಯ ಯಾತ್ರಿಕರ ಭಯಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಭಕ್ತರ ದಟ್ಟಣೆ ಕಂಡು ಬರಲಿಲ್ಲ. ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಕೆಲವು ಭಕ್ತರು ಮಾತ್ರ ಆಗಮಿಸಿ ಸೇವೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net