

ಶೃಂಗೇರಿ: ಪ್ರಥಮ ಶ್ರಾವಣದ ಸೋಮವಾರ ಪ್ರಯುಕ್ತ ನರಸಿಂಹವನದ ಗುರುನಿವಾಸದಲ್ಲಿ ಮಧ್ಯಾಹ್ನ ಶ್ರೀಮಠದ ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಅವರು ಶ್ರೀಚಂದ್ರಮೌಳೀಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಜಗದ್ಗುರುಗಳು ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಆನೇಕ ವಿಧವಾದ ಲ, ಪುಷ್ಪಾಗಳ ಸಮರ್ಪಿಸಿದ ನಂತರ ಪಂಚಾಮೃತಗಳಿಂದ ಅಭಿಷೇಕ ನಡೆಸಿ ಪೂಜೆ ಸಲ್ಲಿಸಿದರು. ನಂತರ ಭವ್ಯವಾದ ಚಿನ್ನದ ಮಂಟಪದಲ್ಲಿ ಶ್ರೀ ಚಂದ್ರಮೌಳೀಶ್ವರ, ರತ್ನಗರ್ಭ ಗಣಪತಿ, ಆದಿ ಶಂಕರಾಚಾರ್ಯರು, ಸರಸ್ವತೀ, ಮಹಾಲಕ್ಷ್ಮಿ,ಬಂಗಾರದ ಮತ್ತು ಸ್ಪಟಿಕದ ಶ್ರೀ ೀ ಚಕ್ರಗಳು, ಸೀತಾರಾಮ, ಗಣಪತಿ, ಜಗದ್ಗುರುಗಳಾದ ಶ್ರೀನೃಸಿಂಹಭಾರತೀ ಹಾಗೂ ಶ್ರೀಸಚ್ಚಿದಾನಂದ ಮಹಾಸ್ವಾಮೀಜಿಗಳ ಪಾದುಕೆಗಳಿಗೆ ಪೂಜೆ ನೆರವೇರಿಸಿದರು.
ಶ್ರೀಆದಿಶಂಕರ ಭಗತ್ಪಾದರು ಶ್ರೀಮಠದಲ್ಲಿ ಪ್ರತಿದಿನ ಭಗವಂತನ ಆರಾಧನೆ ನಡೆಸುವ ಸಂಕಲ್ಪದಿಂದ ಶ್ರೀಶಾರದಾಂಬೆ ಹಾಗೂ ಶ್ರೀ ಚಂದ್ರಮೌಳೀಶ್ವರರ ಪೂಜೆ ನಡೆಸಬೇಕು ಎಂಬ ಅಪ್ಪಣೆ ಮಾಡಿ ಶ್ರೀ ಮಠದ ಜಗದ್ಗುರು ಶ್ರೀ ಸುರೇಶ್ವರಾಚಾರ್ಯ ಅವರಿಗೆ ಶ್ರೀ ಚಂದ್ರಮೌಳೀಶ್ವರ ಲಿಂಗ ಹಾಗೂ ಶ್ರೀರತ್ನಗರ್ಭ ಗಣಪತಿಯನ್ನು ನೀಡಿ ಅನುಗ್ರಹಿಸಿದರು.
ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಪ್ರತಿದಿನ ತ್ರಿಕಾಲ ಪೂಜೆ ನಡೆಯುತ್ತದೆ. ಬೆಳಗ್ಗೆ ಹಾಗೂ ಮಧ್ಯಾಹ್ನದ ಪೂಜೆಯನ್ನು ಆರ್ಚಕರು ಸಲ್ಲಿಸಿದರೆ ರಾತ್ರಿ ಸ್ವತ: ಜಗದ್ಗುರುಗಳು ಪೂಜೆ ನೆರವೇರಿಸುತ್ತಾರೆ. ಆದರೆ ಶ್ರಾವಣ ಹಾಗೂ ಕಾರ್ತಿಕ ಮಾಸದ ಸೋಮವಾರ ಮಧ್ಯಾಹ್ನ ಶ್ರೀಗಳು ಪೂಜೆ ನೆರವೇರಿಸುತ್ತಾರೆ. ಶ್ರೀಗಳು ಸಲ್ಲಿಸುವ ವಿಶೇಷ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ವೀಕ್ಷಿಸಲು ಭಕ್ತಸಮೂಹ ಕಾತರದಿಂದ ಕಾಯುತ್ತಾರೆ. ಶ್ರೀಆದಿಶಂಕರರಿಂದ ಆರಂಭವಾಗಿ 37ನೇ ಯತಿಗಳ ವರೆಗೆ ನಿರಂತರವಾಗಿ ಪೂಜೆಸಲ್ಪಡುವ ಶ್ರೀ ಚಂದ್ರಮೌಳೀಶ್ವರನನ್ನು ದರ್ಶಿಸಲು ಜನ್ಮಾಂತರದ ಪುಣ್ಯವಿರಬೇಕು ಎಂಬ ಪ್ರತೀತಿ ಇದೆ.