ಮನೆ ಮನೆಗೆ ಶ್ರಾವಣ ಮಾಸದ ಶರಣ ಸಂದೇಶ

28
Published on

ಮೈಸೂರು: ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕ, ಕದಳಿ ಮಹಿಳಾ ವೇದಿಕೆಯಿಂದ ಆಯೋಜಿಸಿರುವ ಮನೆ ಮನೆಗೆ ಶ್ರಾವಣ ಮಾಸದ ಶರಣ ಸಂದೇಶ ಕಾಯಕ್ರಮ ನೇತಾಜಿ ನಗರದಲ್ಲಿ ಆಯೋಜಿಸಲಾಗಿತ್ತು.
ಬಡಾವಣೆಯ ಸೌಮ್ಯಾ ಸೌಗಂಧ ಮನೆಯಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಜೆಎಎಸ್‌ಎಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಡಿ.ಎಸ್. ಸದಾಶಿವಮೂರ್ತಿ, ಅಲ್ಲಮಪ್ರಭುವಿನ ಕೃತಯುಗದಲ್ಲಿ ಗುರು ಶಿಷ್ಯಂಗೆ ಬಡಿದೆ ಬುದ್ಧಿ ಹೇಳಿದೊಡೆ ಆಗಲಿ ಮಹಾಪ್ರಸಾದವೆಂಬನಯ್ಯ ಎಂಬ ವಚನವನ್ನು ಆಧಾರವಾಗಿಟ್ಟುಕೊಂಡು ಉಪನ್ಯಾಸ ನೀಡಿದರು.
ಘಟಕದ ಅಧ್ಯಕ್ಷ ಮ.ಗು. ಸದಾನಂದಯ್ಯ ಅಧ್ಯಕ್ಷತೆ ವಹಿಸಿದ್ದರು. ಆಯೋಜಕರಾದ ಸೌಮ್ಯಾ ಸೌಗಂಧ, ನಿವೃತ್ತ ಎಸಿಪಿ ನಾಗಪ್ಪ ಪುಟ್ಟಪ್ಪ ಮಡಿಗಂಡಿ, ಹಾಲೇಶಪ್ಪ ಚಿಕ್ರಸಾಲಿ, ಕುಮಾರಸ್ವಾಮಿ, ಡಾ.ಡಿ.ಎಸ್. ಗುರು, ಚಿನ್ನಸ್ವಾಮಿ, ಬಸವರಾಜ್, ಪುಟ್ಟಸ್ವಾಮಿ, ನಾಗವೇಣಿ, ಸುಧಾ ಪ್ರಕಾಶ್, ಲೋಕೇಶಪ್ಪ ,ಕೆ ಎಂ ಎಫ್ ನಿವೃತ್ತ ನಿರ್ದೇಶಕ ಅಶೋಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net