

ಬೆಲಹೊಂಗಲ: ಪಟ್ಟಣದ ಸ್ವಾಭಿಮಾನಿ ಕ್ರಿಯಾಶೀಲ ಗೆಳೆಯರ ಬಳಗ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಐದನೇ ವರ್ಷದ ಪಾದಯಾತ್ರೆ ಸಮೀಪದ ಸುೇತ್ರ ಸೊಗಲ ಸೋಮೇಶ್ವರ ದೇವಸ್ಥಾನದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಒಂದು ತಿಂಗಳು ಕಾಲ ತಾಲೂಕಿನ ವಿವಿಧ ಗ್ರಾಮಗಳ ದೇವಸ್ಥಾನಗಳಿಗೆ ಪಾದಯಾತ್ರೆ ಕೈಗೊಳ್ಳಲಾಗಿತ್ತು.
ಶಿಕ ಸಂತೋಷ ಹುಣಶೀಕಟ್ಟಿ ಮಾತನಾಡಿ, ಶ್ರಾವಣ ಮಾಸದ ಶುಭ ದಿನಗಳಲ್ಲಿ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಲಾಗಿದೆ. ಯುವಕರನ್ನು ದುಶ್ಚಟಗಳಿಂದ ಮುಕ್ತಗೊಳಿಸಿ, ಅವರಲ್ಲಿ ಧಾರ್ಮಿಕ ಮನೋಭಾವ ಬೆಳೆಸುವುದು ಪಾದಯಾತ್ರೆಯ ಉದ್ದೇಶವಾಗಿತ್ತು ಎಂದರು.
ಬಸ್ ನಿರ್ವಾಹಕ ಮಡಿವಾಳಪ್ಪ ಹೊಸೂರ ಪ್ರಸಾದ ಸೇವೆ ಸಲ್ಲಿಸಿದರು. ಮಾಜಿ ಸೆನಿಕ ಬಸವರಾಜ ಸರಾಯದ, ಪೊಲೀಸ್ ಸಿಬ್ಬಂದಿ ಮಂಜುನಾಥ ಕರಿಗಾರ, ಮಲ್ಲಿಕಾರ್ಜುನ ಮಾವಿನಕಟ್ಟಿ, ಕುತುಬ್ ವಕ್ಕುಂದ, ರಿತೇಶ ಪಾಟೀಲ, ಮಂಜುನಾಥ ಜ್ಯೋತಿ, ಈರಪ್ಪ ಕಾಡೇಶನವರ, ಆನಂದ ತೋಟಗಿ, ಆನಂದ ಹಿರೇಮಠ, ರವಿ ವನ್ನೂರ, ಪ್ರಕಾಶ ಬೆಳಗಾವಿ, ದರ್ಶನ ಸವದತ್ತಿ, ರವಿ ಹುಲಕುಂದ, ಶರೀ ನದಾ, ಶಿವಾನಂದ ಬಿಸಗುಪ್ಪಿ, ದ್ಯಾಮಣ್ಣಾ ಗೋರಬಾಳ, ಪ್ರವಿಣ ಕಡತಾಳ, ಗುರು ಕಡತಾಳ, ಸಾಯಿನಾಥ ನಾಯ್ಕ, ವಿಶಾಲ ಹೋಮಕರ, ಅರ್ಜುನ ಪೆಂಟೇದ, ಗಣೇಶ ಕರಿಗಾರ ಇತರರಿದ್ದರು.