ನಾವು ಮಾಡುವ ವ್ಯವಹಾರದಲ್ಲಿ ಪ್ರಾಮಾಣಿಕತೆ ಇರಬೇಕು: ಜಿ. ಪಿ. ಕಟ್ಟಿಮನಿ

08GDG04
ಗದಗ ಬಸವ ಯೋಗ ಕೇಂದ್ರದಲ್ಲಿ ಏರ್ಪಡಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಜಿ. ಪಿ. ಕಟ್ಟಿಮನಿ ಮಾತನಾಡಿದರು. ಬಿ. ಎಸ್​. ಗೌಡರ, ಎಸ್​. ಕೆ. ನಾಲತ್ವಾಡಮಠ, ವಿಜಯಲಕ್ಷಿ$್ಮ ಆನೆಹೊಸೂರು, ಎಸ್​. ಎಂ. ಅಂಗಡಿ, ನೀಲಾವತಿ ರಾಯಾಪುರ, ನೀಲಗಂಗಾ ಅರಹುಣಸಿ, ವಿಜಯಾ ಚೆನ್ನಶೆಟ್ಟಿ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಪ್ರಸ್ತುತ ದಿನಗಳಲ್ಲಿ ಎಲ್ಲವೂ ವ್ಯವಹಾರಿಕವಾಗಿ ನಡೆಯುತ್ತಲಿವೆ. ಏನೇ ಮಾಡಿದರೂ ನಮಗೇನು ಲಾಭ? ಎಷ್ಟು ಗಳಿಕೆಯಾಗುತ್ತದೆ ಎಂಬ ಲೆಕ್ಕಾಚಾರದ ವಾತಾವರಣದಲ್ಲಿ ಎಲ್ಲರು ಇದ್ದಾರೆ. ವ್ಯವಹಾರದಲ್ಲಿ ಲಾಭ ಬೇಕು, ಆದರೆ ಅದು ಅತೀಯಾಗಿ ಇರಬಾರದು. ಬಸವಣ್ಣನವರು ವಚನದಂತೆ ಮಾಡುವ ವ್ಯವಹಾರದಲ್ಲಿ ಪ್ರಾಮಾಣಿಕತೆ ಇರಬೇಕು ಎಂದು ನಿವೃತ್ತತ್ತ ಶಿಕ್ಷಕ ಜಿ. ಪಿ. ಕಟ್ಟಿಮನಿ ಹೇಳಿದರು
ನಗರದ ಬಸವ ಯೋಗ ಕೇಂದ್ರದಲ್ಲಿ ಗುರುವಾರ ಶ್ರಾವಣ ಮಾಸದ ಪ್ರಯುಕ್ತ ಏರ್ಪಡಿಸಿದ್ದ ಸಾಪ್ತಾಹಿಕ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಕೇವಲ ವ್ಯವಹಾರದಲ್ಲಿ ಪ್ರಾಮಾಣಿಕತೆ ತೋರದೆ ನಮ್ಮ ಕುಟುಂಬ ಸದಸ್ಯರ ಜೊತೆ, ಬಂಧು ಬಾಂಧವರ ಜೊತೆ, ಆತ್ಮೀಯರ ಜೊತೆ, ಸಮಾಜದೊಡನೆ ನಾಟಕೀಯವಾಗಿರದೇ ಪ್ರೀತಿ, ವಿಶ್ವಾಸ, ಪ್ರಾಮಾಣಿಕತೆಯಿಂದ ನಡೆದುಕೊಳ್ಳಬೇಕು ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಬಿ. ಎಸ್​. ಗೌಡರ , ನಿವೃತ್ತ ಕೃಷಿ ವಿಾನಿ ಎಸ್​. ಕೆ. ನಾಲತ್ವಾಡಮಠ, ಅಕ್ಕಮಹಾದೇವಿ ಯೋಗ ವಿಾನ ಕೇಂದ್ರದ ಅಧ್ಯೆ ವಿಜಯಲಕ್ಷಿ$್ಮ ಆನೆಹೊಸೂರು, ಎಸ್​. ಎಂ. ಅಂಗಡಿ, ವಿ. ಎಂ. ಮುಂದಿನಮನಿ, ಎಂ. ಜಿ. ಕುಂದಗೋಳ, ನೀಲಾವತಿ ರಾಯಾಪುರ, ನೀಲಗಂಗಾ ಅರಹುಣಸಿ, ವಿಜಯಾ ಚೆನ್ನಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net