ಕೊಂಡ್ಲಹಳ್ಳಿ ಸುತ್ತಮುತ್ತ ಶ್ರಾವಣ ಸಂಭ್ರಮ

K HALLI CHILUME
Published on

ಕೊಂಡ್ಲಹಳ್ಳಿ: ಶ್ರಾವಣ ಮಾಸದ ಸಡಗರ ಕೊಂಡ್ಲಹಳ್ಳಿ ಹಾಗೂ ಸುತ್ತಮುತ್ತಗಳಲ್ಲಿ ಪ್ರತಿನಿತ್ಯ ಕಂಡುಬರುತ್ತಿದೆ. ಆಂಜನೇಯ, ವೀರಭದ್ರ, ಶಿವ, ಲಕ್ಷ್ಮೀ ಹೀಗೆ ಅನೇಕ ದೇಗುಲಗಳು ಭಕ್ತರಿಂದ ತುಂಬಿತುಳುಕುತ್ತಿವೆ.

ಅದರಲ್ಲೂ ಓಬಣ್ಣನಹಳ್ಳಿಯ ಗುರುವಯ್ಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಜಗಳೂರು, ಭರಮಸಾಗರ, ಚಳ್ಳಕೆರೆ, ಚಿತ್ರದುರ್ಗ, ನಾಯಕನಹಟ್ಟಿ, ಗೌರಸಮುದ್ರ ಸೇರಿ ದೂರದ ಊರುಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹರಕೆ ತೀರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬಿಳಿನೀರು ಚಿಲುಮೆಯ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಶ್ರಾವಣದ ಆರಂಭದಿಂದಲೂ ನಿತ್ಯವೂ ರುದ್ರಾಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಗಳು ನಡೆಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net