ತುಪ್ಪೂರಲ್ಲಿ ಶ್ರಾವಣ ಸಂಭ್ರಮ

24bhr 1
Published on

ಬಾಳೆಹೊನ್ನೂರು: ಸಮೀಪದ ತುಪ್ಪೂರು ಬಿರೇಕಲ್ಲು ಭೂತೇಶ್ವರಸ್ವಾಮಿ ಮತ್ತು ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಸತ್ಯನಾರಾಯಣ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳನ್ನು ಶ್ರದ್ಧಾ, ಭಕ್ತಿಯಿಂದ ನಡೆಸಲಾಯಿತು.
ಶ್ರಾವಣ ಮಾಸದ ಅಂಗವಾಗಿ ಬಿರೇಕಲ್ಲು ಭೂತೇಶ್ವರ ಸ್ವಾಮಿ, ದುರ್ಗಾಪರಮೇಶ್ವರಿ, ನಾಗದೇವರು, ಉಮಾಮಹೇಶ್ವರಿ, ನವಗ್ರಹ ದೇವರು, ಹುಲಿ ಚೌಡೇಶ್ವರಿ, ಮಳಿಯಾಳಿ ಜಟ್ಟಿಗ, ಬಸವೇಶ್ವರ ಹಾಗೂ ಪರಿವಾರ ದೇವತೆಗಳಿಗೆ ವಿಶೇಷ ಅಭಿಷೇಕ, ಅರ್ಚನೆ, ಪುಷ್ಪಾಲಂಕಾರ ನೆರವೇರಿಸಿ ಮಹಾಮಂಗಳಾರತಿ ಮಾಡಲಾಯಿತು. ದೇವಸ್ಥಾನದ ದರ್ಶನ ಪಾತ್ರಿಯಿಂದ ದರ್ಶನ, ಹೇಳಿಕೆ, ಕೇಳಿಕೆ ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ದೇವಾಲಯದ ವಿವಿಧ ಕಾರ್ಯಗಳಿಗೆ ಸಹಕರಿಸಿದ ದಾನಿಗಳನ್ನು ದೇವಸ್ಥಾನ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಸುಬ್ರಾಯಗೌಡ, ಕಾರ್ಯದರ್ಶಿ ಮಂಜುನಾಥ್ ತುಪ್ಪೂರು, ಸೇರಿದಂತೆ ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net