ಶ್ರೀ ರಂಗನಾಥ ಸನ್ನಿದಿಯಲ್ಲಿ ಶ್ರಾವಣ ಶನಿವಾರ

1724492813746
Published on


ಅರಸೀಕೆರೆ ಗ್ರಾಮಾಂತರ : ತಾಲೂಕಿನ ಕಸಬಾ ಹೋಬಳಿಯ ಹಾರನಹಳ್ಳಿ ಸಮೀಪದ ಗುತ್ತಿನಕೆರೆ ಶ್ರೀ ರಂಗನಾಥ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಶನಿವಾರ ಅಂಗವಾಗಿ ಶ್ರೀ ರಂಗನಾಥ ಸ್ವಾಮಿಗೆ ವಿವಿಧ ಧಾರ್ಮಿಕ ಕಾರ್ಯ ನೆರವೇರಿತು. ಸ್ವಾಮಿಗೆ ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ಶ್ರೀಗಂಧದಿಂದ ವಿಶೇಷ ಅಲಂಕಾರಮಾಡಲಾಗಿತ್ತು. ತೋಮಾಲೆ, ಶ್ರೀ ವಾರಿಯರ ಉತ್ಸವ ಮೂರ್ತಿಗೂ ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ದೇವರಿಗೆ ಮಂಗಳಾರತಿ ನೆರವೇರಿತು. ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net