

ನಾಪೋಕ್ಲು: ಸಮೀಪದ ಕಕ್ಕುಂದಕಾಡುವಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಥಮ ಶ್ರಾವಣ ಶನಿವಾರ ಭಕ್ತಾದಿಗಳ ಸಂಗಮದೊಂದಿಗೆ ಶ್ರದ್ಧಾ-ಭಕ್ತಿಯಿಂದ ಸಂಪನ್ನಗೊಂಡಿತ್ತು.
ಪ್ರತಿ ವರ್ಷದಂತೆ ಶ್ರಾವಣ ಶನಿವಾರ ಪ್ರಯುಕ್ತ ದೇವಾಲಯದಲ್ಲಿ ಬೆಳಗ್ಗೆ ಅಭಿಷೇಕ, 11 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ನೆರೆದ ಭಕ್ತಾದಿಗಳು ತಮ್ಮ ಭಕ್ತಿ ಅನುಸಾರ ವಿವಿಧ ಪೂಜಾ-ಕೈಂಕರ್ಯಗಳು ಸೇವೆಯ ಸಂಕಲ್ಪ ನೆರವೇರಿಸಿ ಭಕ್ತಿ ಪರವಶರಾದರು. ಮಧ್ಯಾಹ್ನ 12.30 ಕ್ಕೆ ವೆಂಕಟೇಶ್ವರನಿಗೆ ವಿಶೇಷ ಮಹಾಪೂಜೆ, ಮಹಾಮಂಗಳಾರತಿಯ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿತು. ನೆರೆದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಿದ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ದೇವಾಲಯದ ಮುಖ್ಯ ಆರ್ಚಕ ಸುಧೀರ ಅವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಟ್ಟರು. ದೇವಸ್ಥಾನದಲ್ಲಿ ಶ್ರಾವಣ ಶನಿವಾರ ಪೂಜಾ ಕಾರ್ಯಕ್ರಮಗಳು ಆ. 31 ರವರೆಗೆ ನಡೆಯಲಿವೆ.
ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಟಿ.ಆರ್.ಶ್ರೀನಿವಾಸ, ಕಾರ್ಯಾಧ್ಯಕ್ಷ ಟಿ.ಕೆ ಸೂರ್ಯಕುಮಾರ್, ಕಾರ್ಯದರ್ಶಿ ಟಿ.ಎನ್. ರಮೇಶ್, ಖಜಾಂಚಿ ಎಂ.ಪಿ.ಗೋಪಾಲ, ನಿರ್ದೇಶಕರಾದ ರಾಧಾಕೃಷ್ಣ ರೈ, ಸೀನ, ಶ್ಯಾಮ್ ಮಂದಪ್ಪ, ಗ್ರಾಪಂ ಅಧ್ಯಕ್ಷ ವನಜಾಕ್ಷಿ ರೇಣುಕೇಶ್, ಉಪಾಧ್ಯಕ್ಷ ಕುಲ್ಲೇಟಿರ ಹೇಮಾ ಅರುಣ್. ಹಿರಿಯರಾದ ಟಿ.ವಿ.ಶ್ರೀನಿವಾಸ್ ಉಪಸ್ಥಿತರಿದ್ದರು.