

ಚಿತ್ರದುರ್ಗ: ಗೋನೂರು ಮುತ್ತಯ್ಯನಹಟ್ಟಿ ಸಮೀಪದ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಆ.18ರಂದು ಶ್ರಾವಣ ಮಾಸ ಪೂಜಾ ಮತ್ತು ಶ್ರೀ ರಾಜರಾಜೇಶ್ವರಿ ದೇವಾಲಯದ ಚಂದ್ರಶಾಲಾ ಕಟ್ಟಡ ಪ್ರಾರಂಭವನ್ನು ಏರ್ಪಡಿಸಲಾಗಿದೆ.
ಬೆಳಗ್ಗೆ 8.30ಕ್ಕೆ ಪುಣ್ಯಾಹ ಗಣಪತಿ ಪೂಜೆ, ಋತ್ವಿಗ್ವರಣನೆ, ಕಲಶ ಸ್ಥಾಪನೆ, ದುರ್ಗಾ ಹೋಮ, ಮಹಾ ಪೂರ್ಣಾಹುತಿ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿತರಣೆ ಇರುತ್ತದೆ.
ಬೆಳಗ್ಗೆ 10ಕ್ಕೆ ಕೋಟಿ ರುದ್ರ ಪಾರಾಯಣ ವೃಂದ, ರುದ್ರ ಪಾರಾಯಣ,ವಿವಿಧ ಭಜನಾ ಮಂಡಳಿಗಳಿಂದ ಲಲಿತ ಸಹಸ್ರನಾಮ ಪಾರಾ ಯಣ ಹಾಗೂ 11.30 ಕ್ಕೆ ಮಹಾ ಪೂರ್ಣಾಹುತಿ ನೆರವೇರಲಿದೆ. ಶ್ರೀ ಶಿವಲಿಂಗಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಟಿ.ರಘುಮೂರ್ತಿ, ಎಂ.ಚಂದ್ರಪ್ಪ ಉಪಸ್ಥಿತರಿರುತ್ತಾರೆ. ಪೂಜೆಗೆ ಹೆಸರು ಕೊಡುವವರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 961171 7758, 9480336862ನ್ನು ಸಂಪರ್ಕಿಸಬಹುದು ಎಂದು ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ನಾಗರಾಜ್‌ಭಟ್ ತಿಳಿಸಿದ್ದಾರೆ.