

ಕನಕಗಿರಿ: ಪಟ್ಟಣ ಸೇರಿ ತಾಲೂಕಿನಾದ್ಯಂತ ಶ್ರಾವಣ ಮಾಸದ ವರಮಹಾಲಕ್ಷ್ಮೀ ಪೂಜೆಯನ್ನು ಭಕ್ತರು ಶುಕ್ರವಾರ ಶ್ರದ್ಧಾ ಭಕ್ತಿ ಮಾಡಿದರು. ಜನರು ಮನೆಗಳಲ್ಲಿ ವರಮಹಾಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಆಭರಣಗಳಿಂದ ಶೃಂಗರಿಸಿದರು.
ದೇವಿಗೆ ನಾನಾ ಬಗೆಯ ಹಣ್ಣುಗಳನ್ನು ಅರ್ಪಿಸಿದರು. ಅಲ್ಲದೇ, ಮುತ್ತೈದೆಯರಿಗೆ ಉಡಿ ತುಂಬಿ ಹಬ್ಬ ಆಚರಿಸಿದರು. ಮಹಿಳೆಯರು ಮನೆಗಳಿಗೆ ತೆರಳಿ ಪೂಜೆ ಕೈಂಕಾರ್ಯದಲ್ಲಿ ಪಾಳ್ಗೊಂಡರು. ಇನ್ನು ನಾನಾ ದೇವಸ್ಥಾನಗಳಲ್ಲಿ ವಿಶೇಷವಾಗಿ ಪೂಜೆಯನ್ನು ಸಲ್ಲಿಸಲಾಯಿತು .