

ಚಳ್ಳಕೆರೆ: ಅಧಿಕ ಶ್ರಾವಣ ಮಾಸದ ಅಂಗವಾಗಿ ತಾಲೂಕಿನ ಬಾಲೇನಹಳ್ಳಿ ಗ್ರಾಮದಲ್ಲಿ ಆ.5ರ ಬೆಳಗ್ಗೆ 6ಕ್ಕೆ ಆಂಜನೇಯ ದೇವಸ್ಥಾನದಲ್ಲಿ 101 ಎಡೆ ಅರ್ಪಿಸುವ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಡಾ.ಅನಂತರಾಮ್ ಗೌತಮ್, ಬಿ.ಸಿ.ಜಯಪ್ರಕಾಶ್, ಬಿ.ವಿ.ಸುಬ್ರಹ್ಮಣ್ಯ, ಮುರುಳಿಕೃಷ್ಣ ಮತ್ತು ನಾಗೇಶ್ ಭಾರಧ್ವಜ್ ನೇತೃತ್ವದಲ್ಲಿ ಪೂಜಾ ಕಾರ್ಯ ನಡೆಯಲಿವೆ.
ಬೆಳಗ್ಗೆ 6ಕ್ಕೆ ಧ್ವಜಾರೋಹಣ, ಮಹಾಗಣಪತಿ ಪೂಜೆ, ಶುದ್ಧ ಪುಣ್ಯಾಹ, ಗಂಗಾಪೂಜೆ, ಕಳಸ ಸ್ಥಾಪನೆ, ಆವಾಹನೆ, ಆರಾಧನೆ, ಪಂಚಾಮೃತ
ಅಭಿಷೇಕ, ಜಲಾಭಿಷೇಕ, ಊರಿನ ಬುಡ್ಡೆಕಲ್ಲಿಗೆ 101 ಕೊಡ ನೀರಿನ ಅಭಿಷೇಕ ಬಳಿಕ ಸ್ವಾಮಿಗೆ ವಿಶೇಷ ಅಲಂಕಾರ, ತೈಲಮರ್ಜನೆ, ಕುಂಕುಮ ಲೇಪನ, ಪುಷ್ಪಾಲಂಕಾರ, ಸ್ವಾಮಿಯ ಅಷ್ಟೋತ್ತರ ಶತನಾಮ ಪೂರ್ವಕ ಅರ್ಚನೆ ನಡೆಯಲಿವೆ.
ನಂತರ ಮಂತ್ರಪುಷ್ಪ, ನೈವೇದ್ಯ ಹಾಗೂ ವಿಶೇಷ 101 ಎಡೆ ಸಮರ್ಪಣೆ ಮಾಡಲಾಗುವುದು. ಸಂಜೆ 5 ಗಂಟೆಗೆ ಕಲಾ ತಂಡಗಳೊಂದಿಗೆ ಪಲ್ಲಕ್ಕಿ ಉತ್ಸವ ಪ್ರಮುಖ ಬೀದಿಗಳಿಂದ ಪಾದಗಟ್ಟೆಯವರೆಗೆ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಟಿ.ರಘುಮೂರ್ತಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಜೆಡಿಎಸ್ ಮುಖಂಡ
ಎಂ.ರವೀಶ್‌ಕುಮಾರ್, ಗ್ರಾಪಂ ಸದಸ್ಯರಾದ ಒ.ಟಿ.ರಾಜೇಶ್, ಶಿಲ್ಪಾ ವೆಂಕಟೇಶ್, ಜ್ಯೋತಿ ಸತೀಶ್ ಇತರರು ಪಾಲ್ಗೊಳ್ಳುವರು.