

ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ ಚತುರ್ಥ ಶ್ರಾವಣ ಶನಿವಾರದಂದು ಲಕ್ಷ ತುಳಸಿ ಅರ್ಚನೆ, ನವಕ ಪ್ರಧಾನ ಕಲಶಾಭಿಷೇಕ ನೆರವೇರಿತು.
ಋತ್ವಿಜರ ವಿಷ್ಣು ಸಹಸ್ರನಾಮ ಪಠಣದ ನಂತರ ಅರ್ಚಕ ಚಂದ್ರಶೇಖರ ಅವರಿಂದ ಕಲ್ಪೋಕ್ತ ಪೂಜೆ ನಡೆಯಿತು. ಮಂತ್ರಾಕ್ಷತೆ ಸಂದರ್ಭ ಅರ್ಚಕ ಜನಾರ್ದನ ಅಡಿಗ ಪ್ರಥಮ ಶ್ರಾವಣ ಶನಿವಾರದಿಂದ ಮೊದಲ್ಗೊಂಡು ಕೊನೆಯ ವಾರದವರೆಗೆ ಕ್ಷೇತ್ರದಲ್ಲಿ ನಡೆದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ವ್ಯಾಖ್ಯಾನ ನಡೆಸಿಕೊಟ್ಟರು.
ಸಾಲಿಗ್ರಾಮ ಕೂಟ ಮಹಾಜಗತ್ತು ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದಾ ಹೊಳ್ಳರ ನೇತೃತ್ವದಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ವಾಚನ ನಡೆಯಿತು. ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ದಂಪತಿ, ಉಪಾಧ್ಯಕ್ಷ ಕುಡ್ನಲ್ಲಿ ಗಣೇಶ ಮೂರ್ತಿ ನಾವಡ ದಂಪತಿ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ಕೋಶಾಧಿಕಾರಿ ಪರಶುರಾಮ ಭಟ್ಟ, ಸದಸ್ಯರಾದ ಕೇರಳ ಮೀಯಪದವು ಶ್ರೀಧರ ರಾವ್ ದಂಪತಿ, ಮಂಗಳೂರು ಕಾಟಿಪಳ್ಳ ಸದಾಶಿವ ಐತಾಳ, ಕೆ.ಎ.ಪಿ.ಐತಾಳ, ಕೂಟ ಮಹಾಜಗತ್ತು ಜತೆ ಕಾರ್ಯದರ್ಶಿ ಸುರೇಶ ತುಂಗ, ಗ್ರಾಮ ಮೊಕ್ತೇಸರ ವೃಂದ ನೇತಾರ ಮಹಾಬಲ ಹೇರ್ಳೆ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.