

ಯಲಬುರ್ಗಾ: ಶ್ರಾವಣ ಮಾಸದಲ್ಲಿ ಅನೇಕ ಹಬ್ಬಗಳು ಇದ್ದರೂ ಶ್ರೀಕೃಷ್ಣ ಜನ್ಮಾಷ್ಟಮಿ ತನ್ನದೆಯಾದ ಮಹತ್ವ ಪಡೆದಿದೆ ಎಂದು ಪಪಂ ಸದಸ್ಯೆ ಡಾ.ನಂದಿತಾ ದಾನರಡ್ಡಿ ಹೇಳಿದರು.
ಪಟ್ಟಣದ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀಕಷ್ಣ ಜನ್ಮಾಷ್ಟಮಿ ಹಾಗೂ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಳಿದು ಹೋಗುವ ದೈವಿ ಸಂಸ್ಕೃತಿಯನ್ನು ಪುನಃ ಜಾಗೃತಿಗೊಳಿಸಲು ಧಾರ್ಮಿಕ ಕಾರ್ಯಕ್ರಮಗಳು ಅವಶ್ಯ. ಪಾಲಕರು ತಮ್ಮ ಮಕ್ಕಳನ್ನು ರಾಧಾ-ಕೃಷ್ಣ ರೂಪದಲ್ಲಿ ಶೃಂಗರಿಸಿ ಸಂಭ್ರಮಿಸಿರುವುದು ಸಂತಸದ ವಿಚಾರ ಎಂದರು.
ನ್ಯಾಯವಾದಿ ಅಕ್ಕಮಹಾದೇವಿ ಪಾಟೀಲ್ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅಪಾರವಿದೆ ಎಂದರು. ಬ್ರ.ಕು.ಉಮಾ ಅಕ್ಕ ಅವರನ್ನು ಸನ್ಮಾನಿಸಲಾಯಿತು. ಮಕ್ಕಳು ರಾಧಾ-ಕೃಷ್ಣನ ವೇಷ ಧರಿಸಿ ಗಮನ ಸೆಳೆದರು.
ಗಣ್ಯರಾದ ಚನ್ನಮ್ಮ ಪಾಟೀಲ್, ಮೀನಾಕ್ಷಮ್ಮ ಮಲಕಸಮುದ್ರ, ಅನ್ನಪೂರ್ಣ ಹಿರೇಮಠ, ಸಿದ್ದಯ್ಯ ಕೊಣ್ಣೂರು, ಮಹಾಗುಂಡಪ್ಪ ಕಟಗೇರಿ, ಮುತ್ತಯ್ಯ ಮಲಕಸಮುದ್ರ, ಶಿವಕುಮಾರ ನಿಡಗುಂದಿ, ಶೀಲ್ಪಾ ಬಾಗಲಿ, ವೀರಣ್ಣ ಮ.ನಿಂಗೋಜಿ ಇತರರಿದ್ದರು.