ಶ್ರಾವಣ ಮಾಸದಲ್ಲಿ ಸಪ್ತರ್ಷಿಗಳ ಪ್ರತಿಷ್ಠಾಪನೆ

Kampli sanman
ಕಂಪ್ಲಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದೇವಾಂಗ ಸಮಾಜದ ಸಭೆಯಲ್ಲಿ ಪುರಸಭೆ ನಿವೃತ್ತ ನೌಕರ ಎಸ್.ಚಿದಾನಂದ, ನಾಮನಿರ್ದೇಶ ಸದಸ್ಯ ಗದ್ಗಿ ವಿರೂಪಾಕ್ಷಿ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಸಪ್ಪರದ ರಾಘವೇಂದ್ರ, ಎಂ.ರಾಜೇಶವರ್ಮಾ, ಎಸ್.ತುಳಸಿರಾಮಚಂದ್ರ, ದೂಪದ ಸುಭಾಶ್ಚಂದ್ರ, ಪಿ.ರಾಘವೇಂದ್ರ ಇತರರಿದ್ದರು.
Published on

ಕಂಪ್ಲಿ: ಇಲ್ಲಿನ ಬಣ್ಣದ ಚೌಡೇಶ್ವರಿದೇವಿ ದೇವಸ್ಥಾನದಲ್ಲಿ ಭಾನುವಾರ ದೇವಾಂಗ ಸಮಾಜದ ಸಭೆ ನಡೆಯಿತು.

ದೇವಾಂಗ ಸಮಾಜದ ಅಧ್ಯಕ್ಷ ಸಪ್ಪರದ ರಾಘವೇಂದ್ರ ಮಾತನಾಡಿ, ಪುರಾತನ ಗದ್ದೆ ಚೌಡೇಶ್ವರಿ ದೇವಸ್ಥಾನದ ಗೋಡೆಗಳು ಬಿರುಕು ಬಿಟ್ಟಿದ್ದು, ಜೀರ್ಣೋದ್ಧಾರಗೊಳಿಸಲಾಗುವುದು. ಸಪ್ತರ್ಷಿಗಳ ಪ್ರತಿಮೆಗಳಲ್ಲಿ ಕೆಲವು ಶಿಥಿಲಗೊಂಡಿದ್ದರಿಂದ ಶ್ರಾವಣ ಮಾಸದಲ್ಲಿ ಹೊಸ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುವುದು.

ಸಮಾಜದ ಕ್ರಿಯಾಶೀಲ ಚಟುವಟಿಕೆಗಳಿಗಾಗಿ ದೇವಾಂಗ ಸಮಾಜ ಸಂಘದ ಸಲಹಾ ಸಮಿತಿ ಸದಸ್ಯರನ್ನಾಗಿ ಪೋಡಿ ನಾರಾಯಣಪ್ಪ, ಶೀಲವಂತರ ಸುಬ್ಬಣ್ಣ, ವನಕೆ ಶಂಕರ್, ಹಂಪರಗುಂದಿ ನಾಗರಾಜರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಪುರಸಭೆಯ ನಿವೃತ್ತ ನೀರು ಸರಬರಾಜು ಸಹಾಯಕ ಎಸ್.ಚಿದಾನಂದ, ಪುರಸಭೆ ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡ ಗದ್ಗಿ ವಿರೂಪಾಕ್ಷಿ ಅವರನ್ನು ಗೌರವಿಸಲಾಯಿತು. ದೇವಾಂಗ ಸಮಾಜದ ಪದಾಧಿಕಾರಿಗಳಾದ ಎಂ.ರಾಜೇಶವರ್ಮಾ, ಎಸ್.ತುಳಸಿರಾಮಚಂದ್ರ, ದೂಪದ ಸುಭಾಶ್ಚಂದ್ರ, ಪಿ.ರಾಘವೇಂದ್ರ, ದೂಪದ ಪ್ರಶಾಂತ, ಎಂ.ಶಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net