

ಚೌಳಹಿರಿಯೂರು: 12ನೇ ಶತಮಾನದ ಬಸವಾದಿ ಶರಣರು ಹೇಳಿದನ್ನು ತಮ್ಮ ನಿಜವಾದ ಆಚರಣೆಯಲ್ಲಿ ತಂದು ಸಮಾಜ ಸುಧಾರಣೆಗೆ ಶ್ರಮಿಸಿದರು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕುಂಕಾನಾಡು ಗ್ರಾಮದಲ್ಲಿ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ನಡೆದ ಶ್ರಾವಣ ಸಂಜೆ ಶರಣರ ಸಂದೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಬೇರೆಯವರ ತಪ್ಪುಗಳನ್ನು ತಿದ್ದುವ ಬದಲು ತಮ್ಮ ತಪ್ಪುಗಳನ್ನು ತಿದ್ದಿ ಬದುಕುವ ಮತ್ತು ಆತ್ಮಾವಲೋಕನ ಮಾಡಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ತಾಲೂಕು ಶರಣ ಸಾಹಿತ್ಯ ಪರಿಷತ್ ಬಸವಾದಿ ಶರಣರ ವಿಚಾರಗಳನ್ನು ಜನಮಾನಸಕ್ಕೆ ತಲುಪಿಸುವ ಕಾರ್ಯದ ಮೂಲಕ ಜನರಲ್ಲಿರುವ ಮೌಢ್ಯ ಕಂದಾಚಾರ, ಅಂಧಶ್ರದ್ಧೆ, ಹೋಗಲಾಡಿಸುವ ವೈಚಾರಿಕ ಮನೋಭಾವ ಬೆಳೆಸುವ ಮತ್ತು ಸಮ ಸಮಾಜದ ಕಲ್ಪನೆ ಮೂಲಕ ಎಲ್ಲ ವರ್ಗದ ಜನರನ್ನು ಒಂದುಗೂಡಿಸಿ ಮಾಡುತ್ತಿರುವ ಈ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ಕೆ.ಬಿದರೆಯ ಶ್ರೀ ಪ್ರಭುಕುಮಾರ ಸ್ವಾಮೀಜಿ ಮಾತನಾಡಿ, ಶರಣರ ಸಂದೇಶ ಕಾರ್ಯಕ್ರಮದ ಮೂಲಕ ಶರಣರ ವಿಚಾರ ಧಾರೆಗಳನ್ನು ಜನಮಾನಸಕ್ಕೆ ತಲುಪಿಸುವ ಕೆಲಸ ಮಾಡುತ್ತಿರುವುದು ಉತ್ತಮ ಕಾರ್ಯ ಎಂದು ತಿಳಿಸಿದರು.
ಕುಂಕಾನಾಡು ಬಸವರಾಜಪ್ಪ, ಯಗಟಿ ರವಿಪ್ರಕಾಶ್, ಪುರ ಪ್ರಸನ್ನ, ಆಲದಹಳ್ಳಿ ಮಹೇಶ್ವರಪ್ಪ, ಎಂ.ಆರ್.ಪ್ರಕಾಶ್, ಶಿವಲಿಂಗ ಸ್ವಾಮಿ, ಶೋಭಜಗದೀಶ್, ಮುತ್ತಾಣೆಗೆರೆ ನಿರಂಜನಮೂರ್ತಿ, ಹಿರೇನಲ್ಲೂರು ಶಾಂತಕುಮಾರ್, ಚಿಂತಕ ಹೊಸರು ಪುಟ್ಟರಾಜು, ನಾಗರತ್ನಮ್ಮ ಶಿವಲಿಂಗಯ್ಯ, ಕೆ.ವಿರೂಪಾಕ್ಷಪ್ಪ, ಕೆ.ಎಸ್.ನಾಗರಾಜ್, ಗಂಗಾಧರ, ಆಲದಹಳ್ಳಿ ಮಹೇಶ್ವರಪ್ಪ, ಮೋಹನ್ ಕುಮಾರ ದೇವೇಂದ್ರಪ್ಪ ಇದ್ದರು.