ಮಾನವೀಯ ಮೌಲ್ಯ ಮರೆಯುತ್ತಿರುವ ಮನುಷ್ಯ

mkg1
Published on


ಬಸವಾಪಟ್ಟಣ: ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯ ಸ್ವಾರ್ಥ, ದುರಾಸೆಯ ದಾಸನಾಗಿ ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದಾನೆ ಎಂದು ಗವಿಮಠದ ಶಿವಕುಮಾರ ಹಾಲಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಸೋಮವಾರ ರಾತ್ರಿ ಇಲ್ಲಿನ ಗದ್ದುಗೆ ಮಠದಲ್ಲಿ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.

ದೈವಿ ಗುಣಗಳು ಬೆಳೆಯಲಿಕ್ಕೆ ಇಂತಹ ಧರ್ಮಸಭೆಗಳು ಸಹಕಾರಿಯಾಗಲಿವೆ. ಅಂತಹ ದೃಷ್ಟಿಯಿಂದ ಲಿಂ. ವಿಶ್ವೇಶ್ವರ ಶಿವಾಚಾರ್ಯ ಶ್ರೀಗಳ ಗವಿಮಠದಲ್ಲಿ ಪ್ರತಿ ಅಮಾವಾಸ್ಯೆ ಚತುರ್ದಶಿಯಂದು, ಗದ್ದುಗೆ ಮಠದಲ್ಲಿ ಪ್ರತಿ ಶ್ರಾವಣ ಮಾಸದಂದು ಧರ್ಮ ಸಭೆ ನಡೆಸಲಾಗುತ್ತಿದೆ ಎಂದರು.

ಸಿದ್ಧಾರೂಢ ವೃದ್ಧಾಶ್ರಮದ ಕೃಷ್ಣಾನಂದ ಸ್ವಾಮೀಜಿ ಮಾತನಾಡಿ, ಶ್ರಾವಣ ಮಾಸದಂದು ಧರ್ಮ ಗ್ರಂಥಗಳ ಅವಲೋಕನ, ಪುರಾಣ ಪುಣ್ಯಗಳಿಂದ ಹೆಚ್ಚು ಪುಣ್ಯ ಲಭಿಸುತ್ತದೆ ಎಂದು ಹಿಂದೂ ಗ್ರಂಥಗಳಲ್ಲಿ ಉಲ್ಲೇಖವಿದೆ. ಆದ್ದರಿಂದ ಪ್ರತಿನಿತ್ಯ 10 ನಿಮಿಷವಾದರೂ ಮನುಷ್ಯ ಸತ್ಸಂಗದಲ್ಲಿ ಭಾಗಿಯಾಗಬೇಕು ಎಂದರು.

ಪ್ರಜಾಪಿತ ಈಶ್ವರಿಯ ವಿವಿಯ ನೀಲಕ್ಕ, ಪತ್ರಕರ್ತ ಎನ್.ವಿ. ರಮೇಶ್ ಉಪನ್ಯಾಸ ನೀಡಿದರು.

ಮಠದ ಕಲಾ ಬಳಗದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಪಂ ಉಪಾಧ್ಯಕ್ಷೆ ಕುಸುಮಾ ಬಸವರಾಜಪ್ಪ, ಅಜ್ಜಾರ ಮಂಜಣ್ಣ, ಸಂಗಾಹಳ್ಳೆರಾ ತಿಪ್ಪಣ್ಣ, ಮಠದ ಆಡಳಿತ ಸಮಿತಿ ಮುಖ್ಯಸ್ಥ ಕೆ.ಎಂ. ವೀರಯ್ಯ, ಕಲಾ ಬಳಗದ ನಿಯೋಜಿತ ಅಧ್ಯಕ್ಷ ಎಸ್.ಆರ್. ಸುರೇಶ್, ಪೂಜಾರ್ ಮಂಜಣ್ಣ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net