ಎಸ್​ಐಟಿ ಪ್ರಶ್ನೆಗೆ ಶ್ರವಣ್​ ತಬ್ಬಿಬ್ಬು

naresh shravan
Published on

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರದ್ದು ಎನ್ನಲಾದ ಅಶ್ಲೀಲ ಸಿಡಿ ಕೇಸ್​ನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾಗುತ್ತಿರುವ ಶ್ರವಣ್​ನನ್ನು ವಿಶೇಷ ತನಿಖಾ ತಂಡ ಗುರುವಾರ ಸುದೀರ್ ವಿಚಾರಣೆ ನಡೆಸಿದೆ. ಬೆಳಗ್ಗೆ 11 ಗಂಟೆಗೆ ಆಡುಗೋಡಿ ಟೆಕ್ನಿಕಲ್​ ಸೆಂಟರ್​ಗೆ ಆಗಮಿಸಿದ ಶ್ರವಣ್​ನನ್ನು ಸಂಜೆಯವರೆಗೂ ವಿಚಾರಣೆ ನಡೆಸಿದ ತನಿಖಾಧಿಕಾರಿಗಳು ಸಾಕ್ಷ$್ಯ ಮುಂದಿಟ್ಟು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಎಲ್ಲ ಪ್ರಶ್ನೆಗಳಿಗೂ ಶ್ರವಣ್​ ಒಂದೇ ವಾಕ್ಯದಲ್ಲಿ ಉತ್ತರಿಸಿದ್ದು, ಕೆಲವಕ್ಕೆ ಗೊಂದಲದ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ಎಸ್​ಪಿ ರಸ್ತೆಯಲ್ಲಿ ಕ್ಯಾಮರಾ ಖರೀದಿ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ಬಗ್ಗೆ ಪ್ರಶ್ನಿಸಿದಾಗ, ಇದನ್ನು ಒಪ್ಪಿಕೊಂಡ ಶ್ರವಣ್​, ಈ ಕ್ಯಾಮರಾ ಏತಕ್ಕೆ ಬಳಕೆ ಮಾಡಲಾಗಿದೆ ಎಂದು ತಿಳಿಸಿಲ್ಲ. ಸಹೋದರನ ಬ್ಯಾಂಕ್​ ಖಾತೆಗೆ 20 ಲಕ್ಷ ರೂ. ವರ್ಗಾವಣೆ ಮಾಡಿರುವುದರ ಬಗ್ಗೆ ಪ್ರಶ್ನಿಸಿದಾಗ ಆರಂಭದಲ್ಲಿ ಸಾಲ ಮಾಡಿರುವ ಹಣ ಎಂದು ಗೊಂದಲದ ಹೇಳಿಕೆ ಕೊಟ್ಟಿದ್ದಾನೆ. ನಗದು ರೂಪದಲ್ಲಿ ಬೇರೆಯವರ ಮೂಲಕ ಸಹೋದರನ ಖಾತೆಗೆ ಹಣ ಹಾಕಿರುವುದಕ್ಕೆ ಸಂಬಂಧಿಸಿದಂತೆ ನಾಲ್ವರ ಹೇಳಿಕೆ ದಾಖಲು ಮಾಡಿರುವುದನ್ನು ಎಸ್​ಐಟಿ ತೋರಿಸಿದಾಗ ತಬ್ಬಿಬ್ಬಾಗಿದ್ದಾನೆ ಎನ್ನಲಾಗಿದೆ.

ಜತೆಗೆ ಕೆಲ ತಾಂತ್ರಿಕ ವಿಚಾರಗಳ ಕುರಿತು ಮಾಹಿತಿ ಕಲೆ ಹಾಕಲಾಗಿದೆ. ಸಿಡಿಯಲ್ಲಿರುವ ಯುವತಿ ಖಾತೆಗೆ ಹಣ ವರ್ಗಾವಣೆ ಮಾಡಿರುವುದು, ಯುವತಿ ಜತೆ ವಿಡಿಯೋ ರೆಕಾರ್ಡ್​ ಮಾಡಿರುವ ಸಮಯದಲ್ಲಿ ಸಂಪರ್ಕ ದಲ್ಲಿದ್ದುದು, ಸರ್ವರ್​ ಹ್ಯಾಕ್​ ಮಾಡಿ ರಷ್ಯಾದಿಂದ ವಿಡಿಯೋ ಅಪ್​ಲೋಡ್​ ಮಾಡಿರುವಂತೆ ಬಿಂಬಿಸಲು ಯತ್ನಿಸಿರುವುದು, ಸಿಡಿ ಬಿಡುಗಡೆಯಾದ ಬಳಿಕ ಆರ್​ಟಿನಗರದಲ್ಲಿ ಯುವತಿ ಜತೆ ಚರ್ಚಿಸಿರುವುದು, ನಾಪತ್ತೆಯಾದ ಬಳಿಕ ಚೆನ್ನೆ$ನ ಲಾಡ್ಜ್​ನಲ್ಲಿ ಯುವತಿ ಜತೆ ತೆರಳಿರುವ ಬಗ್ಗೆ ಕೂಲಂಕಷವಾಗಿ ಮಾಹಿತಿ ಕಲೆ ಹಾಕಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net