ಹಿಂದು ಧರ್ಮದ ಪರ್ಯಾಯವೇ ಲಿಂಗಾಯತ

mkg
Published on

ಚನ್ನಗಿರಿ: ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶಿವಶರಣರು ಹಿಂದು ಧರ್ಮದ ಪರ್ಯಾಯವಾಗಿ ಲಿಂಗಾಯತ ಧರ್ಮವನ್ನು ಅಸ್ತಿತ್ವಕ್ಕೆ ತಂದರು ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಶ್ರೀಗಳು ತಿಳಿಸಿದರು.

ತಾಲೂಕಿನ ಕಂಚಿಗನಹಾಳ್ ಗ್ರಾಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕದಿಂದ ಏರ್ಪಡಿಸಿದ್ದ ಶ್ರಾವಣ ಬಂತು ಅನುಭಾವ ತಂತು ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ಹಿಂದು ಎಂದರೆ ಮಾನವ ಧರ್ಮ, ಅನಂತ ಸತ್ಯಧರ್ಮ, ವಿಶ್ವದ ಪುರಾತನ ಧರ್ಮವಾಗಿದೆ. ಹಿಂದೂ ಧರ್ಮ ಭಾರತೀಯ ಉಪಖಂಡದ ಪ್ರಧಾನ ಧರ್ಮ ಮತ್ತು ಶಾಶ್ವತ ಧರ್ಮ ಎಂಬ ಅರ್ಥ ಕೊಡುವ ಸಂಸ್ಕೃತ ಪದವಾಗಿದೆ ಎಂದರು.

ಬಸವಣ್ಣನವರು ಬರುವ ಮೊದಲು ಇದ್ದಂತ ಹಿಂದು ಧರ್ಮದ ಪಾಲನೆ ಮಾಡುವುದು ಅಂದಿನ ಜನರಿಗೆ ಕಷ್ಟವಾಗಿತು.್ತ ಸಂಸ್ಕೃತ ಕಲಿಕೆ ಕೆಲವರ ಪಾಲಾಗಿತ್ತು. ಇದನ್ನು ಕಂಡ ಬಸವಣ್ಣನವರು ಲಿಂಗಾಯತ ಧರ್ಮವನ್ನು ತಂದು ಜನ ಸಾಮಾನ್ಯರು ಎಲ್ಲರಂತೆ ಬದುಕಲು ಅವಕಾಶ ಮಾಡಿಕೊಟ್ಟರು ಎಂದು ವಿವರಿಸಿದರು.

ಬಸವಣ್ಣ ಪ್ರತಿಪಾದಿಸಿದ ಲಿಂಗಾಯತ ಧರ್ಮ ಹಿಂದು ಧರ್ಮದ ಒಳಗೆ ಸೇರಿಲ್ಲ. ಸಕಲ ಜೀವಾತ್ಮರಿಗೆ ಒಳಿತು ಬಯಸುವ, ಎಲ್ಲ ಅಸಮಾನತೆ, ಮೌಢ್ಯ ಕಿತ್ತೆಸೆಯುವ ಧರ್ಮ. ಮಾನವರಾಗಿ ಪ್ರೀತಿ ವಿಶ್ವಾಸದಿಂದ ಬಾಳಬೇಕೆನ್ನುವ ವಿಶ್ವಧರ್ಮ, ಇದರ ನೆಲೆ-ಕಲೆಗಳನ್ನು ಸರಿಯಾಗಿ ಅರ್ಥೈಸಿಕೊಂಡರೆ ಇಂದಿನ ಗೊಂದಲಗಳಿಗೆ ತನ್ನಷ್ಟಕ್ಕೆ ತಾನೇ ತೆರೆ ಬೀಳಲಿದೆ ಎಂದರು.

12ನೇ ಶತಮಾನದಲ್ಲಿ ಲಿಂಗಾಯತ ಧರ್ಮದ ಪ್ರಗತಿಪರ ವಿಚಾರ, ಆಚಾರಗಳೇ ಧರ್ಮದ ಆಧಾರ ಸ್ಥಂಭಗಳು, ದಯವೇ ಧರ್ಮದ ಮೂಲವಾಗಿದ್ದು, ಭಯ, ಹಿಂಸೆ, ಮೋಸ, ಸುಳ್ಳು ಇತ್ಯಾದಿ ಗುಣಗಳಿಗೆ ಇಲ್ಲಿ ಅವಕಾಶವೇ ಇಲ್ಲ ಎಂದರು.

ಗ್ರಾಪಂ ಅಧ್ಯಕ್ಷೆ ದೇವಮ್ಮ, ಮುಗಳೀಹಳ್ಳಿ ಎಂ.ಜಿ. ಧನಂಜಯ, ತುಮ್‌ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ಕಾಂಗ್ರೆಸ್ ಮುಖಂಡ ವಡ್ನಾಳ್ ಜಗದೀಶ್, ವೀಣಾ ಕೆ.ಎಸ್. ಚಂದ್ರಶೇಖರ್, ಗರಗ ಜಗದೀಶ್, ಶರಣಪ್ಪ, ಜಿ.ಬಿ. ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net