ವ್ಯಕ್ತಿತ್ವ ವಿಕಸನಕ್ಕೆ ಶರಣರ ವಿಚಾರಧಾರೆ

chn
Published on

ಚನ್ನಗಿರಿ: ಗಾಳಿ, ನೀರು, ಆಹಾರ ಮನುಷ್ಯನ ದೈಹಿಕ ಬೆಳವಣಿಗೆಗೆ ಕಾರಣವಾದರೆ, ಶರಣರ ವಿಚಾರಧಾರೆಗಳು, ಅಧ್ಯಾತ್ಮದ ತತ್ವ ಸಿದ್ಧಾಂತಗಳು ವ್ಯಕ್ತಿಯ ವಿಕಸನಕ್ಕೆ ಅವಶ್ಯಕವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್.ಜಿ. ಮಧುಕುಮಾರ್ ತಿಳಿಸಿದರು.

ತಾಲೂಕಿನ ಹೀರೆಕೋಗಲೂರು ಗ್ರಾಮದ ನಾಡೋಜ ಡಾ.ಎಂ. ಚಿದಾನಂದಮೂರ್ತಿ ಸಮುದಾಯ ಭವನದಲ್ಲಿ ಪಾಂಡೋಮಟ್ಟಿ ವಿರಕ್ತಮಠದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರಾವಣ ಬಂತು ಅನುಭಾವ ತಂತು ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಪಾಂಡೋಮಟ್ಟಿ ವಿರಕ್ತಮಠದ ಡಾ.ಶ್ರೀ ಗುರುಬಸವ ಶ್ರೀಗಳು ಮಾತನಾಡಿ, ವಚನಗಳು ಪ್ರತಿಯೊಬ್ಬರ ಜೀವನದ ಅನುಭಾವದಿಂದ ರೂಪಿತವಾದ ಅನುಭವದ ಪ್ರಮಾಣಗಳು. ಇವು ಜನಸಾಮಾನ್ಯರ ಜೀವನಕ್ಕೆ ತೀರಾ ಹತ್ತಿರವಾಗಿದೆ. ಅತೀ ಸರಳ ಸುಂದರ ಆಡು ಭಾಷೆಯ ನಿರೂಪಣೆಯಲ್ಲಿ ಬಸವಾದಿ ಶರಣರು ದಿವ್ಯಜ್ಞಾನದ ಪರಿಚಯವನ್ನು ವಚನ ಸಾಹಿತ್ಯದ ಮೂಲಕ ಮನುಕುಲಕ್ಕೆ ನೀಡಿದ್ದಾರೆ ಎಂದರು.\

ಸಾಹಿತಿ ಉಚ್ಚಂಗಿ ಪ್ರಸಾದ್ ಮಾತನಾಡಿದರು. ಜಾಗತಿಕ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಆವರಗೆರೆ ರುದ್ರಮುನಿ, ಡಾ. ಚಿದಾನಂದಮೂರ್ತಿ ಪ್ರತಿಷ್ಠಾನದ ಅಧ್ಯಕ್ಷ ಎಚ್.ಯು. ಮಲ್ಲಿಕಾರ್ಜುನ, ಗ್ರಾಮದ ಮುಖಂಡರಾದ ಶಶಿಕುಮಾರ್, ಜಗದೀಶಗೌಡ, ಸತೀಶ್‌ಗೌಡ, ಪಂಚಾಕ್ಷರಯ್ಯ, ಚಿಂತಕ ಶರಣಪ್ಪ, ಮುಗಳಿಹಳ್ಳಿ ಧನಂಜಯ, ಕಾಕನೂರು ಎಂ.ಬಿ. ನಾಗರಾಜ್, ಎಂ.ಯು. ಚನ್ನಬಸಪ್ಪ, ಪಾಂಡೋಮಟ್ಟಿ ಮೂರ್ತಿ, ಚಂದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net