

ಪರಶುರಾಮಪುರ: ಸಾರ್ವಜನಿಕ ಸ್ಥಳ ಸೇರಿ ಜನವಸತಿ ಪ್ರದೇಶದ ಜನರು ಸದಾ ನೈರ್ಮಲ್ಯ ಕಾಪಾಡಲು ಆದ್ಯತೆ ನೀಡಬೇಕು. ಈ ಮೂಲಕ ಸ್ವಸ್ಥಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಈರಣ್ಣ ಹೇಳಿದರು.
ದೊಡ್ಡಚೆಲ್ಲೂರು ಗ್ರಾಮದಲ್ಲಿ ವಿವಿಧ ಸಂಘ-ಸಂಸ್ಥೆಗಳು, ಶಾಲೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಶ್ರಮದಾನದಲ್ಲಿ ಮಾತನಾಡಿದರು.
ಗ್ರಾಪಂ ಸಿಬ್ಬಂದಿ, ಆಶಾ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಿವಿಧೆಡೆ ಸ್ವಚ್ಛತೆ ನಡೆಸಿದರು.
ಗ್ರಾಪಂ ಸದಸ್ಯರಾದ ಪ್ರಸನ್ನಕುಮಾರ, ಪಟೇಲ್ ರಾಘವೇಂದ್ರ, ಕೆಂಚರಾಯಪ್ಪ, ಆಶಾ ಕಾರ್ಯಕರ್ತೆ ತಿಮ್ಮಕ್ಕ, ಕೆಂಚಮ್ಮ, ರೇಣುಕಾ, ಜಯಮ್ಮ, ಮಂಜುಳಾ ಇದ್ದರು.