ಧರ್ಮಸ್ಥಳ ಸಂಘದಿಂದ ಶ್ರಮದಾನ

ಗುಯ್ಯ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶ್ರಮದಾನ ನಡೆಯಿತು.
ಗುಯ್ಯ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶ್ರಮದಾನ ನಡೆಯಿತು.
Published on

ಸಿದ್ದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗುಯ್ಯ ಗ್ರಾಮದ ಅಗಸ್ತೇಶ್ವರ ದೇವಾಲಯ ಆವರಣದಲ್ಲಿ ಇತ್ತೀಚೆಗೆ ಶ್ರಮದಾನ ಆಯೋಜಿಸಲಾಗಿತ್ತು.

ಸುಮಾರು 20ಕ್ಕೂ ಹೆಚ್ಚು ಒಕ್ಕೂಟದ ಮಹಿಳೆಯರು ದೇವಾಲಯ ಆವರಣದಲ್ಲಿ ಬೆಳೆದಿದ್ದ ಗಿಡಗಳನ್ನು ಕಡಿದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಶುಚಿಗೊಳಿದರು.

ಸೇವಾ ಪ್ರತಿನಿಧಿ ಉಷಾ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಿದ್ದಾಪುರ ಗುಯ್ಯ ಒಕ್ಕೂಟ ವತಿಯಿಂದ ಪ್ರತಿ ವರ್ಷ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ. ಆ ಮೂಲಕ ಸುಂದರ ಪರಿಸರ ನಿರ್ಮಾಣ ಮಾಡಲು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ದೇವಾಲಯದ ಪ್ರಮುಖರಾದ ರಾಮಚಂದ್ರ ಭಟ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸ್ವಚ್ಛತಾ ಅಭಿಯಾನದ ಮೂಲಕ ಜಾಗೃತಿ ಮೂಡಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಒಕ್ಕೂಟದ ಅಧ್ಯಕ್ಷ ಉದಯ್, ಪ್ರಮುಖರಾದ ನವ್ಯಜ್ಯೋತಿ, ಕಾಮದೇನು, ಅಗಸ್ತೇಶ್ವರ, ಸ್ವಪ್ನ ಸಂಘದ ಸದಸ್ಯರು ಪಾಲ್ಗೊಂಡಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net