ಕಾಡಬೆಟ್ಟು ಸರ್ಕಾರಿ ಶಾಲೆಯಲ್ಲಿ ಶ್ರಮದಾನ

Btw_Shramadana
Published on

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ವಗ್ಗ ಇದರ ವತಿಯಿಂದ ಬಂಟ್ವಾಳ ತಾಲೂಕಿನ ಕಾಡಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ ಮಾಡಲಾಯಿತು. ಶೌರ್ಯ ತಂಡದ ಸದಸ್ಯರು ಶಾಲೆಯ ಆವರಣ ಸುತ್ತಮುತ್ತ ಸ್ವಚ್ಛಗೊಳಿಸಿದರು.

ಶೌರ್ಯ ತಂಡದ ಘಟಕ ಪ್ರತಿನಿಧಿ ಪ್ರವೀಣ, ಸಂಯೋಜಕಿ ರೇಖಾ ಪಿ., ಸದಸ್ಯರಾದ ಸಂಪತ್ ಶೆಟ್ಟಿ ಮಹಾಬಲ ರೈ ನಾರಾಯಣ್ ಶೆಟ್ಟಿ, ನಾರಾಯಣ ಪೂಜಾರಿ, ಅಶೋಕ ಬೊಲ್ಮಾರು, ಅಶೋಕ ಹಾರೊದ್ದು, ಲಕ್ಷ್ಮಣ, ರೋಹಿತ್ ಮೋಹನಂದ, ಶಶಿಕಲಾ ವಿನೋದ, ಪ್ರಿಯಾಂಕ, ವಸಂತ ಕಾಡಬೆಟ್ಟು ಶಾಲೆಯ ಶಿಕ್ಷಕಿಯರಾದ ಹರಿಣಾಕ್ಷಿ, ರತ್ನಾವತಿ, ಉಪಸ್ಥಿತರಿದ್ದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಜಾನನ ಭಟ್, ಸದಸ್ಯರಾದ ಲೋಕೇಶ್ ಕೆ., ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಪ್ರಮೋದ್ ಕುಮಾರ್ ರೈ, ವಿನ್ಸೆಂಟ ಮಧ್ವ, ನಾರಾಯಣ ಪೂಜಾರಿ ಅಲಂಪುರಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net