

ಹಾನಗಲ್ಲ: ತಾಲೂಕಿನ ಎಲ್ಲ 42 ಗ್ರಾಪಂ ಹಾಗೂ ಸ್ಥಳಿಯ ಪುರಸಭೆ ವ್ಯಾಪ್ತಿಯ 5 ವಾರ್ಡ್ಗಳು ಸೇರಿದಂತೆ ಒಟ್ಟು 47 ಸ್ಥಳಗಳಲ್ಲಿ ಏಕಕಾಲಕ್ಕೆ ಸ್ವಚ್ಛತಾ ಶ್ರಮದಾನದ ಮೂಲಕ ಮಹಾತ್ಮ ಗಾಂಧಿ, ಲಾಲ್ ಬಹಾದೂರ್ ಶಾಸ್ತ್ರೀ ಅವರ ಜಯಂತಿಯನ್ನು ಬುಧವಾರ ಅರ್ಥರ್ಪೂಣವಾಗಿ ಆಚರಿಸಲಾಯಿತು.
ದೇವಸ್ಥಾನ, ಪ್ರಾರ್ಥನಾ ಮಂದಿರ, ಸರ್ಕಾರಿ ಆಸ್ಪತ್ರೆ, ಗ್ರಾಪಂ ಆವರಣ, ಕೆರೆ, ಪ್ರಮುಖ ರಸ್ತೆ, ವೃತ್ತ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಶ್ರಮದಾನ ಕೈಗೊಳ್ಳುವ ಮೂಲಕ ಸ್ವಚ್ಛಗೊಳಿಸಲಾಯಿತು. ಶಾಸಕ ಶ್ರೀನಿವಾಸ ಮಾನೆ ಅವರು ಸ್ವತಃ ಹಾನಗಲ್ಲ, ಕರಗುದರಿ, ಯಳವಟ್ಟಿ, ಬಮ್ಮನಹಳ್ಳಿ, ಹುಲ್ಲತ್ತಿ, ಬೈಚವಳ್ಳಿ, ಕೊಪ್ಪರಸಿಕೊಪ್ಪ ಗ್ರಾಮಗಳಲ್ಲಿ ನಡೆದ ಸ್ವಚ್ಛತಾ ಕಾರ್ಯದ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ಬಳಿಕ ಮಾತನಾಡಿದ ಶಾಸಕ ಮಾನೆ, ಶ್ರಮದಾನದ ಮೂಲಕ ಅರ್ಥರ್ಪೂಣ ಜಯಂತಿ ಆಚರಣೆಯೊಂದಿಗೆ ಇಡೀ ರಾಜ್ಯಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಮಾಡಲಾಗಿದೆ. ಅಕ್ಟೋಬರ್ನಲ್ಲಿ ಬರುವ ಮುಂದಿನ 4 ಬುಧವಾರಗಳಂದು ತಾಲೂಕಿನ 42 ಗ್ರಾಪಂ ಹಾಗೂ ಹಾನಗಲ್ಲ ಪುರಸಭೆ ವ್ಯಾಪ್ತಿಯಲ್ಲಿ ಬೆಳಗ್ಗೆ 7 ರಿಂದ 10 ಗಂಟೆವರೆಗೆ ಶ್ರಮದಾನಕ್ಕೆ ತೀಮಾರ್ನ ಕೈಗೊಳ್ಳಲಾಗಿದೆ. ಕಾಟಾಚಾರದ ಜಯಂತಿ ಆಚರಣೆ ಬೇಡ ಎನ್ನುವ ಉದ್ದೇಶದಿಂದ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಸಂಘಟಿತವಾಗಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಸಮುದಾಯದ ಸಹಭಾಗಿತವನ್ನೂ ಸಹ ಪಡೆಯಲಾಗಿದೆ. ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು, ಶಿಕ್ಷಕರು, ವಿದ್ಯಾಥಿರ್ಗಳು, ಸರ್ಕಾರಿ ನೌಕರರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಮಹಿಳಾ ಸಂಘಟನೆಗಳ ಸದಸ್ಯರು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಈ ವಿಶೇಷ ಶ್ರಮದಾನ ಅಭಿಯಾನದಲ್ಲಿ ಕೈಜೋಡಿಸಿದ್ದಾರೆ ಎಂದು ವಿವರಿಸಿದರು.
ತಹಸೀಲ್ದಾರ್ ಎಸ್.ರೇಣುಕಾ, ತಾಪಂ ಇಒ ಪರಶುರಾಮ ಪೂಜಾರ ಇತರರು ಉಪಸ್ಥಿತರಿದ್ದರು.