ಶ್ರಮಬಿಂದು ಸಾಗರಕ್ಕೆ ನೀರು ಬಿಡುಗಡೆ

Shramabindu releases water into the ocean
ಆನಂದ ನ್ಯಾಮಗೌಡ
Published on

ಜಮಖಂಡಿ: ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ನಿಂದ ಶ್ರಮಬಿಂದು ಸಾಗರಕ್ಕೆ ಎರಡ್ಮೂರು ದಿನಗಳಲ್ಲಿ ಅರ್ಧ ಟಿಎಂಸಿ ನೀರು ಹರಿಸಲಿದ್ದಾರೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ತಿಳಿಸಿದರು.

ವಿಜಯವಾಣಿ ವರದಿಗಾರರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ರಾಜಾಪೂರ ಬ್ಯಾರೇಜ್‌ನಿಂದ ಹಿಪ್ಪರಗಿ ಬ್ಯಾರೇಜ್‌ಗೆ ಸುಮಾರು 1500 ಕ್ಯೂಸೆಕ್‌ನಷ್ಟು ನೀರು ಹರಿದು ಬರುತ್ತಿದೆ. ಹಿಪ್ಪರಗಿ ಬ್ಯಾರೇಜ್‌ನಲ್ಲಿ 4 ಟಿಎಂಸಿಗಿಂತ ಅಧಿಕ ನೀರಿದೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮಾಹಿತಿ ನೀಡಲಾಗಿದ್ದು, ಬ್ಯಾರೇಜ್‌ನಲ್ಲಿನ ಅರ್ಧ ಟಿಎಂಸಿ ನೀರು ಹರಿಸುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದರು.

ಈ ಕುರಿತು ಆಯುಕ್ತರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನೀರು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಹಿಪ್ಪರಗಿ, ಶಿರಗುಪ್ಪಿ, ಮೈಗೂರ, ಮುತ್ತೂರ, ಕಂಕನವಾಡಿ, ತುಬಚಿ, ಸನಾಳ, ಕಡಕೋಳ, ಆಲಗೂರ, ಪಡಸಲಗಿ ಹಾಗೂ ಅಥಣಿ ತಾಲೂಕಿನ ಝುಂಜರವಾಡ, ಶಿರಹಟ್ಟಿ, ಸೇರಿದಂತೆ 35ಕ್ಕೂ ಅಧಿಕ ಗ್ರಾಮಗಳ ನೀರಿನ ಭವಣೆ ನೀಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net