ಶ್ರಮ ಜೀವಿ, ಸುಸಂಸತರಿಗೆ ಮಣೆ ಹಾಕಲಿ

5MNL1
Published on

ಮುನವಳ್ಳಿ:ಪ್ರಸ್ತುತ ದಿನಗಳಲ್ಲಿ ವಧು&ವರರ ಅನ್ವೇಷಣೆ ಬಲು ಕಷ್ಟದಾಯಕವಾಗಿದೆ. ಹೀಗಾಗಿ, ಗಂಡು&ಹೆಣ್ಣು ಆಯ್ಕೆ ವಿಷಯದಲ್ಲಿ ಆಸ್ತಿ, ಅಂತಸ್ತು ನೋಡದೆ, ಉತ್ತಮ ಕಾಯಕ ಹಾಗೂ ಸುಸಂಸತರಿಗೆ ಮಣೆ ಹಾಕಬೇಕು ಎಂದು ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಜೈಂಟ್ಸ್​ ಗ್ರೂಪ್​ ಆ್​ ಮುನವಳ್ಳಿ, ರಾಣಿ ಚನ್ನಮ್ಮ ಸಹೇಲಿ ಹಾಗೂ ಧಾರವಾಡದ ಆನಂದ ಅಸೋಸಿಯೇಟ್ಸ್​ ಸಹಯೋಗದಲ್ಲಿ ಸಹಕಾರಿ ಧುರೀಣ ಉಮೇಶ ಬಾಳಿ ಅವರ 62ನೇ ಜನ್ಮದಿನದ ಅಂಗವಾಗಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸರ್ವಧರ್ಮ ವಧು&ವರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಬೈಲಹೊಂಗಲದ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿ, ಇಂದಿನ ದಿನಗಳಲ್ಲಿ ಬಸವಾದಿ ಶರಣರ ತತ್ತ್ವ ಪಾಲಿಸುವ ವಧು&ವರರನ್ನು ಪರಸ್ಪರ ಆಯ್ಕೆ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ವೈವಾಹಿಕ ಜೀವನ ಸಮೃದ್ಧವಾಗಲು ಸಾಧ್ಯ. ವಧು&ವರರ ಸಮಾವೇಶದಂಥ ಕಾರ್ಯಕ್ರಮದ ಮೂಲಕ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಸಹಕಾರಿ ಧುರೀಣ ಉಮೇಶ ಬಾಳಿ ಸಮಾಜಮುಖಿ ಕಾರ್ಯ ಶ್ಲಾನೀಯ ಎಂದು ತಿಳಿಸಿದರು.

ಸಂಚಾಲಕ ಸುರೇಶ ಕುಪ್ಪಸಗೌಡ್ರ, ನಿವೃತ್ತ ಪ್ರಾಚಾರ್ಯ ಡಾ.ವೈ.ಎಂ.ಯಾಕೊಳ್ಳಿ ಮಾತನಾಡಿದರು. ಜೈಂಟ್ಸ್​ ಗ್ರೂಪ್​ ಅಧ್ಯ ಭುಜಂಗರಾವ್​ ನಿಕ್ಕಂ ಅಧ್ಯತೆ ವಹಿಸಿದ್ದರು. ಜೈಂಟ್ಸ್​ ವೆಲ್​ೇರ್​ ೌಂಡೇಷನ್​ ಸ್ಪೇಶಲ್​ ಕಮಿಟಿ ಸದಸ್ಯ ಗಜಾನನ ನೀಲಾಕಾರಿ, ರಾಹುಲ್​ ಕಲೂತಿ, ಎ್​.ಎಸ್​.ಸಿದ್ದನಗೌಡ್ರ, ಧರೆಪ್ಪ ಆಲಗೂರ, ಡಾ.ಸಂಜಯ ಹೊಸಮಠ, ತಮ್ಮಣ್ಣ ಕೆಂಚರಡ್ಡಿ, ರಾಜೇಶ ಅಂಗಡಿ, ಜಗದೀಶ ಮುನವಳ್ಳಿ, ವಿದ್ಯಾ ಬಾಳಿ, ಜೈಂಟ್ಸ್​ ಗ್ರೂಪ್​ ಸದಸ್ಯರಾದ ವಿರಾಜ ಕೊಳಕಿ, ಸಂಜು ತುಳಜಣ್ಣವರ, ಶಿವಾಜಿ ಮಾನೆ, ಎಸ್​.ಬಿ.ಗಂಗಾವತಿ, ಅಪ್ಪು ಅಮಠೆ, ಎಂ.ಎಸ್​.ಸರ್ವಿ, ಡಾ.ಎಂ.ಬಿ.ಅಷ್ಟಗಿಮಠ, ಅರುಣಗೌಡ ಪಾಟೀಲ, ಬಾಳು ಹೊಸಮನಿ, ಅನಿಲ ಕಿತ್ತೂರ, ಅಶೋಕ ಪಟ್ಟಣಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net