ಶ್ರದ್ಧೆಯಿಂದ ಜರುಗಿದ ಕಾಳಿಕಾ ಕಮಠೇಶ್ವರ ಗಂಗೆಸ್ಥಳ

ಗಂಗೆ ಮೆರವಣೆಗೆ
ಕಂಪ್ಲಿಯಲ್ಲಿ ಜರುಗಿದ ಕಾಳಿಕಾ ಕಮಠೇಶ್ವರ ದೇವರ ಗಂಗೆಸ್ಥಳ ಮೆರವಣಿಗೆ ಜರುಗಿತು. ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ಎ.ರುದ್ರಪ್ಪಾಚಾರ್, ಪದಾಧಿಕಾರಿಗಳಾದ ಡಿ.ಮೌನೇಶ್, ಚಂದ್ರಶೇಖರಾಚಾರ್, ಡಿ.ಕಾಳಾಚಾರಿ, ನಾರಾಯಣಾಚಾರ್, ರವಿ, ಕೃಷ್ಣ ಸೇರಿ ಇತರರಿದ್ದಾರೆ.
Published on

ಕಂಪ್ಲಿ: ಇಲ್ಲಿನ ವಿಶ್ವಕರ್ಮ ಸಮಾಜದ ಕಾಳಿಕಾ ಕಮಠೇಶ್ವರ ದೇವತೆಯ ಗಂಗೆಸ್ಥಳ ಮೆರವಣಿಗೆ ಶುಕ್ರವಾರ ಜರುಗಿತು. ತುಂಗಭದ್ರಾ ನದಿ ದಡದಿಂದ ಗಂಗೆಸ್ಥಳ ಆರಂಭಗೊಂಡು ಪ್ರಮುಖ ರಸ್ತೆಗಳಲ್ಲಿ ಸಾಗಿ ಕಾಳಿಕಾ ಕಮಠೇಶ್ವರ ದೇವಸ್ಥಾನದಲ್ಲಿ ಸಮಾರೋಪಗೊಂಡಿತು.

ಕಂಪ್ಲಿ ನಗರದ ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ಎ.ರುದ್ರಪ್ಪಾಚಾರ್, ಪದಾಧಿಕಾರಿಗಳಾದ ಡಿ.ಮೌನೇಶ್, ಚಂದ್ರಶೇಖರಾಚಾರ್, ಡಿ.ಕಾಳಾಚಾರಿ, ನಾರಾಯಣಾಚಾರ್, ರವಿ, ಕೃಷ್ಣ, ಮೆಟ್ರಿ ಷಣ್ಮುಖ, ಎ.ಯಂಕಣ್ಣ, ಎಂ.ಮಂಜುನಾಥಾಚಾರ್, ಶಶಿಧರ,
ಗುರುಮೂರ್ತಿ ಸದ್ಭಕ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net