ಶ್ರದ್ಧಾ ಸಹಕಾರಿಗೆ 1.18 ಕೋಟಿ ರೂ. ಲಾಭ

15NPN1
Published on

ನಿಪ್ಪಾಣಿ: ನಮ್ಮಸಂಘಕ್ಕೆ 2024&25ನೇ ಆರ್ಥಿಕ ವರ್ಷದಲ್ಲಿ 1.18 ಕೋಟಿ ರೂ. ಲಾಭವಾಗಿದ್ದು, ಪ್ರಸ್ತುತ 14 ಶಾಖೆಗಳಿದ್ದು, ಪ್ರಸಕ್ತ ಸಾಲಿನಲ್ಲಿ 6 ಶಾಖೆ ತೆರೆಯಲು ಯೋಜಿಸಲಾಗಿದೆ ಎಂದು ಸ್ಥಳಿಯ ಶ್ರೀ ಶ್ರದ್ಧಾ ಕ್ರೆಡಿಟ್​ ಸೌಹಾರ್ದ ಸಹಕಾರ ಸಂಘದ ಸಂಸ್ಥಾಪಕ ಕಾರ್ಯಾಧ್ಯಕ್ಪ ಚಂದ್ರಕಾಂತ ಕೋಠಿವಾಲೆ ಹೇಳಿದರು.

ಸ್ಥಳಿಯ ವಿಎಸ್​ಎಂ ಸೋಮಶೇಖರ ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿಯ ವಿಎಸ್​ಎಂ ಕನ್ವೆನ್ಶನ್​ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರದ್ಧಾ ಸಹಕಾರಿ ಸಂಘದ 26ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಹಿಂದಿನ ಆರ್ಥಿಕ ವರ್ಷದಲ್ಲಿ ಸಂ 660 ಕೋಟಿ ರೂ. ವಾರ್ಷಿಕ ವಹಿವಾಟು, 1.92 ಕೋಟಿ ರೂ. ಕಟ್ಟಡ ನಿಧಿ ಸೇರಿ 7.67 ಕೋಟಿ ರೂ. ನಿಧಿ, 127.12 ಕೋಟಿ ರೂ. ದುಡಿಯುವ ಬಂಡವಾಳ 119.16 ಕೋಟಿ ರೂ. ಠೇವು ಹೊಂದಿ, ರೂ.66.02 ಕೋಟಿ ಸಾಲ ವಿತರಿಸಿದೆ ಎಂದರು.

ಮುಖ್ಯಕಾರ್ಯನಿರ್ವಾಹಕ ದಿನಕರ ಪವಾರ ವರದಿ ಓದಿದರು. ನಿರ್ದೇಶಕ ಸಂಜಯ ಶಿಂತ್ರೆ, ವಿವಿಧ ಶಾಖೆಗಳ ಪದಾಧಿಕಾರಿಗಳು ಮಾತನಾಡಿದರು. ಸದಸ್ಯ ಮಲ್ಲು ರೂಗೆ ಅಧ್ಯತೆ ವಹಿಸಿದ್ದರು. ಉಪಕಾರ್ಯಾಧ್ಯಕ್ಪ ಶಿವಮೂರ್ತಿ ಸ್ವಾಮಿ, ಸಂಚಾಲಕರಾದ ಸುರೇಶ ಕೋಠಿವಾಲೆ, ಪಪ್ಪು ಪಾಟೀಲ, ಶಶಿಕಾಂತ ಕೋಠಿವಾಲೆ, ರಾವಸಾಹೇಬ ಪಾಟೀಲ, ಧನಂಜಯ ಮಾನವಿ, ದಯಾನಂದ ಕೋಠಿವಾಲೆ, ರಾಜಶೇಖರ ಹಿರೆಕೊಡಿ, ನರಸಗೌಡಾ ಪಾಟೀಲ, ಶ್ರೀರಾಮ ಭಾರಮಲ, ರಾಜೇಶ ತಿಳವೆ, ಗಿರಿಜಾ ಪಾಟೀಲ, ಬೇಬಿತಾಯಿ ಪಾಟೀಲ, ಮುರುಂದ್ರ ತೋಡಕರ, ಗಣ್ಯರು ಉಪಸ್ಥಿತರಿದ್ದರು.ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net