

ವಿಜಯಪುರ : ವಿದ್ಯಾರ್ಥಿಗಳು ಗುರುಗಳ ಬಗ್ಗೆ ಯಾವಾಗಲೂ ಗೌರವ ಭಾವನೆ ಹೊಂದಬೇಕು ಎಂದು ಮುಖ್ಯ ಗುರುಮಾತೆ ರೇವತಿ ಕುಲಕರ್ಣಿ ಸಲಹೆ ನೀಡಿದರು.
ಇಲ್ಲಿನ ಕೀರ್ತಿ ನಗರ ಬಡಾವಣೆಯ ಶಮ್ಸ್ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೇತೃತ್ವ ವಹಿಸಿದ್ದ ಶಾಲಾ ಕೋ&ಆರ್ಡಿನೇಟರ್ ಎ.ಕೆ. ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ರವಿಕುಮಾರ ವಾಡಕರ ಅವರು ಗುರು ಪೂರ್ಣಿಮೆ ಮಹತ್ವ ಮತ್ತು ಇತಿಹಾಸ ಮಕ್ಕಳಿಗೆ ವಿವರಿಸಿದರು.