ಮಿಶ್ರ ತಳಿ ಕರುಗಳ ಪ್ರದರ್ಶನ

FotoJet (4)
Published on

ಹಾಲು ಕರೆಯುವ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ದೊಡ್ಡಬಳ್ಳಾಪುರ : ಜಿಲ್ಲಾ ಪಂಚಾಯಿತಿ, ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಂಗಳೂರು ಹಾಲು ಒಕ್ಕೂಟ, ಕೂಗೋನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕೂಗೋನಹಳ್ಳಿಯಲ್ಲಿ ಮಿಶ್ರ ತಳಿ ಕರುಗಳ ಪ್ರದರ್ಶನ ಹಾಗೂ ಹಸುಗಳ ಹಾಲು ಕರೆಯುವ ಸ್ಪರ್ಧೆ ನಡೆಯಿತು.

ಮಿಶ್ರ ತಳಿ ಕರುಗಳ ಪ್ರದರ್ಶನದಲ್ಲಿ ಎಚ್‌ಎಫ್, ಜರ್ಸಿಯ 28 ಕರುಗಳು ಭಾಗವಹಿಸಿದ್ದವು. ಹುಟ್ಟಿನಿಂದ ಮೂರು ತಿಂಗಳ ಒಳಗೆ ಒಂದು ವಿಭಾಗ, ನಾಲ್ಕು ತಿಂಗಳಿಂದ 6 ತಿಂಗಳವರೆಗೆ ಒಂದು ವಿಭಾಗ, 7 ರಿಂದ 9 ತಿಂಗಳವರೆಗೆ ಒಂದು ವಿಭಾಗದಂತೆ ಪ್ರದರ್ಶನ ನಡೆಸಲಾಯಿತು.

ಹಾಲು ಕರೆಯುವ ಸ್ಪರ್ಧೆಯಲ್ಲಿ ಗೀರ್, ಎಚ್‌ಎಫ್, ಜರ್ಸಿ ಸೇರಿ 16 ರಾಸುಗಳು ಭಾಗವಹಿಸಿದ್ದವು.

ಸ್ಪರ್ಧೆ ವಿಜೇತರು

ಸ್ಪರ್ಧೆಯ ಅಂಗವಾಗಿ ಶುಕ್ರವಾರ ಬೆಳಗ್ಗೆ ಹಾಗೂ ಸಂಜೆ ಅತಿ ಹೆಚ್ಚು ಹಾಲು ನೀಡಿದ ಹಸುಗಳು ಮಾಲೀಕರಿಗೆ ಪ್ರಥಮ ಬಹುಮಾನವಾಗಿ ರೂ. 7500, ದ್ವಿತೀಯ ಬಹುಮಾನ ರೂ.5000, ತೃತೀಯ ಬಹುಮಾನ ರೂ.2500 ಹಾಗೂ ತಲಾ ಒಂದೊಂದು ಹಾಲಿನ ಕ್ಯಾನ್ ವಿತರಿಸಲಾಯಿತು. 19.92 ಲೀಟರ್ ಹಾಲು ಕರೆದ ಸುರೇಶ್ ಪ್ರಥಮ ಸ್ಥಾನ ಪಡೆದರೆ, 19.58 ಲೀಟರ್ ಹಾಲು ಕರೆದ ವಿಜಯಕುಮಾರ್ ದ್ವೀತಿಯ ಸ್ಥಾನ. ಹಾಗೂ 19.32 ಲೀಟರ್ ಹಾಲು ಕರೆದ ಕೆಂಪಮ್ಮಮೂರನೇ ಸ್ಥಾನ ಪಡೆದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ರಾಸುಗಳ ಮಾಲೀಕರಿಗೆ ಪ್ರೋತ್ಸಾಹ ಬಹುಮಾನವಾಗಿ 10 ಲೀಟರ್ ಕ್ಯಾಲ್ಸಿಯಂ ಟಾನಿಕ್ ಮತ್ತು ನೆನಪಿನ ಕಾಣಿಕೆ ವಿತರಿಸಲಾಯಿತು.ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ.ವಿಶ್ವನಾಥ್, ಡಾ.ವಿಷ್ಣುವರ್ಧನ್, ಡಾ.ಮಂಜುನಾಥ್, ಡಾ.ರಮೇಶ್, ಡಾ.ಟಿ.ಕೆ.ಮಂಜುನಾಥ್, ಡಾ.ಸತ್ಯನಾರಾಯಣ, ಡಾ.ನಂಜಪ್ಪ, ಡಾ.ಕುಮಾರಸ್ವಾಮಿ, ಡಾ.ದೀಪಕ್, ಡಾ.ಮಾರುತಿ, ಡಾ.ಆರಿಫ್, ಡಾ.ತಿರುಮಲರಾಜು, ಸಿಬ್ಬಂದಿಗಳಾದ ಜಗದೀಶ್, ನಾಗದೇವ್, ವೆಂಕಟೇಶ್ ಮೂರ್ತಿ, ಜಿಸಿ ವೆಂಕಟೇಶ್ ಮೂರ್ತಿ, ನಾಗರಾಜು, ಕೂಗೋನಹಳ್ಳಿಯ ಎಂಪಿಸಿಎಸ್ ಅಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷೆ ರಾಧಮ್ಮ, ಕಾರ್ಯದರ್ಶಿ ಕಿರಣ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net