ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಆನ್ಲೈನ್ ಕ್ಲಾಸ್; ಖಾಸಗಿ ಶಾಲೆಗಳಿಗೆ ನೋಟಿಸ್

Online Class
Published on

ಬೆಂಗಳೂರು; 2021&22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಖಾಸಗಿ ಶಾಲೆಗಳು ಮಕ್ಕಳಿಗೆ ಆನ್​ಲೈನ್​ ತರಗತಿ ಆರಂಭಿಸಿರುವುದಕ್ಕೆ ಶಿಕ್ಷಣ ಇಲಾಖೆ ಶಾಲೆಗಳಿಗೆ ನೋಟಿಸ್​ ಜಾರಿ ಮಾಡಿದೆ.

ರಾಜಾಜಿನಗರ ಮತ್ತು ಮಹಾಾಾಲಕ್ಷ್ಮಿಪುರ ಚೈತನ್ಯ ಟೆಕ್ನೋ ಶಾಲೆಗಳಿಗೆ ಶೋಕಾಸ್​ ನೋಟಿಸ್​ ನೀಡಲಾಗಿದೆ.

ಕರ್ನಾಟಕ ರಾಜ್ಯ ಖಾಸಗಿ ಶಾಲಾ ಪೋಷಕ ಸಂಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಯೋಗಾನಂದ ಅವರು ನೀಡಿದ ದೂರಿನ ಮೇಲೆ ಬೆಂಗಳೂರು ಉತ್ತರ ವಲಯ 1ರ ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಒ) ವಿ.ರಮೇಶ್​ ಅವರು, ಈ ಎರಡು ಶಾಲೆಗಳಿಗೆ ಕಾರಣ ಕೇಳಿ ನೋಟಿಸ್​ ನೀಡಿದ್ದಾರೆ.

ಕೋವಿಡ್​ ಸಮಯದಲ್ಲಿ ಸರ್ಕಾರದ ಆದೇಶದ ವಿರುದ್ಧವಾಗಿ ಆನ್​ಲೈನ್​ ತರಗತಿಗಳನ್ನು ಆರಂಭಿಸಿರುವುದು, ಕೆಲ ಮಕ್ಕಳಿಗೆ ಶುಲ್ಕ ಪಾವತಿಸದ ಕಾರಣ ಆನ್​ಲೈನ್​ ತರಗತಿ ರದ್ದುಪಡಿಸಿ ತಾರತಮ್ಯ ಎಸಗುವ ಮೂಲಕ ಶಿಕ್ಷಣ ಹಕ್ಕು ಕಸಿಯುತ್ತಿರುವ ಬಗ್ಗೆ ಈ ನೋಟಿಸ್​ ನೀಡಿದ ಮೂರು ದಿನಗಳಲ್ಲಿ ಮುದ್ದಾಂ ಪೂರಕ ದಾಖಲೆಗಳೊಂದಿಗೆ ವಿವರಣೆ ಸಲ್ಲಿಸಬೇಕು. ಇಲ್ಲದಿದ್ದರೆ ಕರ್ನಾಟಕ ಶಿಕ್ಷಣ ಕಾಯ್ದೆ ಮತ್ತು ಆರ್​ಟಿಇ ಕಾಯ್ದೆ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಶೀಾರಸು ಮಾಡುವುದಾಗಿ ಬಿಇಒ ನೋಟಿಸ್​ನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net