ಸರ್ಕಾರ ಅನಾಥರನ್ನಾಗಿ ಮಾಡಬಾರದು

CTD 11 PINCHANIoooooooooo
Published on

ಚಿತ್ರದುರ್ಗ: ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೆ ಕಾಲ್ಪನಿಕ ವೇತನ,ನಿಶ್ಚಿತ ಪಿಂಚಣಿ ಹಾಗೂ ಆರೋಗ್ಯ ವಿಮೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀ ಡಂ ಪಾರ್ಕಿನಲ್ಲಿ 35 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಬೆಂಬಲಿಸಿ ಗಂಗಾಧರ್ ಪಾಟೀಲ್ ನೇತೃತ್ವದಲ್ಲಿ ವಿಜಯಪುರ ದಿಂದ ಬೆಂಗಳೂರುವರೆಗೂ ನಡೆಸುತ್ತಿರುವ ಕಾಲ್ನಡಿಗೆ ಜಾಥಾ ಶುಕ್ರವಾರ ಚಿತ್ರದುರ್ಗಕ್ಕೆ ಆಗಮಿಸಿತು.

ನಗರದ ಕರುವಿನಕಟ್ಟೆ ಸರ್ಕಲ್‌ನಿಂದ ಆರಂಭವಾದ ಜಾಥಾ ನಗರದ ಪ್ರಮುಖ ಬೀದಿಗಳ ಮೂಲಕ ಹಿರಿಯೂರಿಗೆ ತೆರಳಿತು. ಚಳ್ಳಕೆರೆ ಬೈ ಪಾಸ್ ರಸ್ತೆ ಶ್ರೀ ವಾಲ್ಮೀಕಿ ವೃತ್ತದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ,ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ,ವೃತ್ತಿ ಮಾಡುವಾಗಲೂ ರೆ ಹೊಟ್ಟೆಯಲ್ಲಿ ದುಡಿದಿದ್ದೇವೆ. ನಿವೃತ್ತಿಯಾದಾಗಲೂ ಅನಾಥ ರನ್ನಾಗಿ ಮಾಡದಂತೆ ಸರಕಾರವನ್ನು ಒತ್ತಾಯಿಸಿದರು. 2040ರವರೆಗೆ ಹಂತ,ಹಂತವಾಗಿ ನೌಕರರು ನಿವೃತ್ತಿಯಾಗುವುದರಿಂದ ಸರಕಾರದ ಮೇಲೆ ಏಕಾಏಕಿ ಆರ್ಥಿಕ ಹೊರೆ ಬೀಳುವುದಿಲ್ಲ ಎಂದರು.

ಸಂಘದ ಜಿಲ್ಲಾಧ್ಯಕ್ಷ ಜಿ.ಎಸ್.ತಿಪ್ಪೇಸ್ವಾಮಿ,ರಾಜ್ಯಸಂಘಟನಾ ಕಾರ್ಯದರ್ಶಿ ಹೊಸದುರ್ಗ ಪ್ರಕಾಶ್,ಪ್ರಾಂಶುಪಾಲರ ಸಂಘದ ಪ್ರಧಾನ ಕಾರ‌್ಯ ದರ್ಶಿ ದುರ್ಗೇಶ್,ಸಂಘಟನಾ ಕಾರ‌್ಯದರ್ಶಿಮಹೇಶ್,ಉಪನ್ಯಾಸಕರಾದ ಗುರುಸ್ವಾಮಿ,ಮೂರ್ತಪ್ಪ,ಜಯಣ್ಣ,ಗುರುಮೂರ್ತಿ,ಪ್ರಾಣೇಶ್, ಸಂಘದ ಹೊಳಲ್ಕೆರೆ ತಾಲೂಕು ಅಧ್ಯಕ್ಷ ಜಯಣ್ಣ,ಬಸವಣ್ಣ,ಮುಖ್ಯಶಿಕ್ಷಕ ಬಸವರಾಜ್,ಚಿಕ್ಕಣ್ಣ,ರಮೇಶ್,ನವೀನ್,ನರಸಪ್ಪ,ಶ್ರೀಧರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net