ತನಿಖೆ ಪೂರ್ಣಗೊಳ್ಳುವವರೆಗೂ ಸೇವೆ ಸಲ್ಲಿಸಲು ಅವಕಾಶ ನೀಡಬಾರದು

IMG20241116205328.jpg
Published on

ಬೆಳಗಾವಿ: ಬೆಳಗಾವಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಎಸ್‌ಡಿಎ ರುದ್ರೇಶ್ ಯಡವಣ್ಣನವರ ಆತ್ಮಹತ್ಯೆ ಪ್ರಕರಣ ಆರೋಪ ಹೊತ್ತು ಪರಾರಿಯಾಗಿದ್ದ ತಹಸೀಲ್ದಾರರು ಜಾಮೀನು ಪಡೆದು ಬಂದು ಮತ್ತೆ ಅಧಿಕಾರವನ್ನು ನಡೆಸುತ್ತಿದ್ದು, ತನಿಖೆ ಪೂರ್ಣಗೊಳ್ಳುವ ವರೆಗೂ ಸೇವೆ ಸಲ್ಲಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಬೆಳಗಾವಿ ತಹಸೀಲ್ದಾರ್ ಕಾರ್ಯಾಲಯದ ಎದುರು ಕಿತ್ತೂರು ಕರ್ನಾಟಕ ಸೇನೆಯ ವತಿಯಿಂದ ಪ್ರತಿಭಟನೆ ನಡೆಯಿತು.

ಆತ್ಮಹತ್ಯೆ ಪ್ರಕರಣ ಆರೋಪ ಹೊತ್ತು ಪರಾರಿಯಾಗಿದ್ದ ತಹಸೀಲ್ದಾರರು ಜಾಮೀನು ಪಡೆದು ಬಂದು ಮತ್ತೆ ಅಧಿಕಾರ ನಡೆಸುತ್ತಿದ್ದಾರೆ. ಇದು ಖಂಡನೀಯ. ತನಿಖೆ ಪೂರ್ಣಗೊಳ್ಳುವವರೆಗೂ ತಹಸೀಲ್ದಾರರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಬಾರದು. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಆದರೆ, ಇಲ್ಲಿ ಜನರಿಗೊಂದು, ಅಧಿಕಾರಿಗಳಿಗೊಂದು ಕಾನೂನು ಎಂಬಂತೆ ವರ್ತಿಸಲಾಗುತ್ತಿದೆ ಎಂದು ಆರೋಪಿಸಿದರು. ಸರ್ಕಾರ ಎಚ್ಚೆತ್ತುಕೊಂಡು ಇತ್ತ ಗಮನಹರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶಿವಾನಂದ ಕೋಲ್ಕಾರ, ವಾಸು ಬಸನಾಯಕರ, ದೇವೇಂದ್ರ ತಳವಾರ, ರಮೇಶ ತಳವಾರ, ಭರಮಾ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net