ಮನೆ ಮೇಲೆ ಗುಂಡು ಹಾರಾಟ

New Project (54)
Published on

ಕಾಸರಗೋಡು: ವರ್ಕಾಡಿ ಪಂಚಾಯಿತಿ ವ್ಯಾಪ್ತಿಯ ನಲ್ಲೆಂಗಿಪದವು ನಿವಾಸಿ ಹರೀಶ್ ಬಿ.ಎಂ. ಅವರ ಮನೆಗೆ ಗುಂಡು ಹಾರಿಸಲಾಗಿದ್ದು, ಗುಂಡೇಟಿನಿಂದ ಬೆಡ್‌ರೂಮಿನ ಕಿಟಿಕಿ ಗಾಜು ಪುಡಿಯಾಗಿದೆ. ಮನೆಯೊಳಗಿದ್ದವರು ಪಾರಾಗಿದ್ದಾರೆ. ಬುಧವಾರ ನಸುಕಿನ ಜಾವ 2.30ಕ್ಕೆ ಗುಂಡು ಹಾರಾಟದ ಶಬ್ದ ಕೇಳಿ ಮನೆಯವರು ಎಚ್ಚೆತ್ತು ಹೊರಕ್ಕೆ ಲೈಟ್ ಹಾಯಿಸಿದಾಗ ಒಂದು ಕಾರು ಹಾಗೂ ಎರಡು ಸ್ಕೂಟರ್‌ಗಳು ಸ್ಥಳದಿಂದ ಸಂಚರಿಸುವುದು ಕಂಡುಬಂದಿತ್ತು. ಈ ಬಗ್ಗೆ ಹರೀಶ್ ನೀಡಿದ ದೂರಿನನ್ವಯ ಮಂಜೇಶ್ವರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದರು. ಕಾಡುಹಂದಿಗಳು ಈ ಪ್ರದೇಶದಲ್ಲಿ ವ್ಯಾಪಕವಾಗಿದ್ದು, ಹಂದಿ ಬೇಟೆಗಾರರು ಸಿಡಿಸಿದ ಗುಂಡು ಗುರಿತಪ್ಪಿ ಬಿದ್ದಿರಬೇಕೆಂಬ ಸಂಶಯವೂ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net