

ವಿಜಯಪುರ: ಬೆಂಗಳೂರು ನಗರ ಸೇರಿ ಹಲವು ಕಡೆಗಳಲ್ಲಿ 12ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹೂಕುಂದದ ಅಜಯ್ (33) ಎಂಬಾತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಪೊಲೀಸರು ಕಾರು, ಮಚ್ಚು, ಲಾಂಗು ವಶಪಡಿಸಿಕೊಂಡಿದ್ದಾರೆ
ಕೋರಮಂಗಲ ಅರಣ್ಯ ಪ್ರದೇಶದ ಬಳಿ ಚನ್ನರಾಯಪಟ್ಟಣ ಸಬ್‌ಇನ್‌ಸ್ಪೆಕ್ಟರ್ ನಂದೀಶ್ ಗುಂಡು ಹಾರಿಸಿದ್ದಾರೆ. ಬಂಧಿತ ಬೆಂಗಳೂರಿನ ಹುಳಿಮಾವು, ಪುಟ್ಟೇನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಚಂದ್ರಾಲೇಔಟ್, ಬನಶಂಕರಿ, ಮಂಚೇನಹಳ್ಳಿ, ನಂದಿ ಗಿರಿಧಾಮ ಠಾಣಾ ವ್ಯಾಪ್ತಿಯಲ್ಲಿ ಡಕಾಯಿತಿ, ಹತ್ಯೆ ಯತ್ನ, ಕಳ್ಳತನ,ರಾಬರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಅರಣ್ಯದಲ್ಲಿರುವ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಾಗ ಅಪರಾಧ ವಿಭಾಗದ ಕಾನ್‌ಸ್ಟೆಬಲ್ ನಾರಾಯಣಸ್ವಾಮಿ ಅವರ ಹೊಟ್ಟೆಗೆ ಇರಿದಿದ್ದು, ಮತ್ತೊಬ್ಬ ಪೇದೆ ಅರುಣ್ ಮೇಲೆ ಹಲ್ಲೆಗೆ ಯತ್ನಿಸಿದಾಗ ಗುಂಡು ಹಾರಿಸಲಾಗಿದೆ. ನಾರಾಯಣಸ್ವಾಮಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಗಣೇಶ್, ಡಿವೈಎಸ್‌ಪಿ ಟಿ.ರಂಗಪ್ಪ, ಸರ್ಕಲ್ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.