ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಸಿಎನ್ಜಿ ಆಧಾರಿತ ಆಟೋ, ಬೈಕ್ಗಳು ಹೆಚ್ಚಾಗಿವೆ. ಆದರೆ ಇವುಗಳಿಗೆ ಸಿಎನ್ಜಿ ಬಂಕ್ಗಳ ಕೊರತೆ ಎದುರಾಗಿದೆ. ಸಿಎನ್ಜಿ ವಾಹನಗಳಿಗೆ ತಕ್ಕಂತೆ ಬಂಕ್ ನಿರ್ಮಾಣಗೊಳ್ಳುತ್ತಿಲ್ಲ ಎಂದು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೈಂದೂರು, ಮುಳ್ಳಿಕಟ್ಟೆ, ಚಿತ್ತೂರು, ಹಾಲಾಡಿ, ಹೆಬ್ರಿ ಮೊದಲಾದ ಭಾಗಗಳಲ್ಲಿ ಬಂಕ್ ನಿರ್ಮಾಣ ಆಗಬೇಕು ಎಂದು ಒಂದು ವರ್ಷದಿಂದ ಆಟೋ ಚಾಲಕರು ಆಗ್ರಹಿಸುತ್ತಿದ್ದಾರೆ. ಆದರೆ ಇವರ ಬೇಡಿಕೆ ಹಾಗೇ ಉಳಿದಿದೆ. ತಾಲೂಕಿಗೊಂದರಂತೆ ಬಂಕ್ ಪ್ರಾರಂಭಿಸುವ ಬಗ್ಗೆ ಇಲಾಖೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ. ಇರುವ ಬೆರಳೆಣಿಕೆಯ ಬಂಕ್ಗಳಲ್ಲಿ ಇಂಧನ ತುಂಬಿಸಿಕೊಳ್ಳಲು ಆಟೋ ಚಾಲಕರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಉಂಟಾಗುತ್ತಿದೆ.
ಉಡುಪಿ ಜಿಲ್ಲೆಗೆ ಎಟಿಜಿಎಲ್ ಸರಬರಾಜು ಮಾಡುವ ಸಿಟಿ ಗೇಟ್ ಸ್ಟೇಷನ್ ಮಂಗಳೂರು ಜಿಲ್ಲೆಯಲ್ಲಿದ್ದು, ಅಲ್ಲಿಂದ ಪೈಪ್ಲೈನ್ ಸಂಪರ್ಕ ವ್ಯವಸ್ಥೆಗೆ ಅನುಮತಿ ದೊರಕದ ಹಿನ್ನೆಲೆಯಲ್ಲಿ ವಿಳಂಬ ಎನ್ನುವ ಕಾರಣ ನೀಡಲಾಗಿತ್ತು.
ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ಸಮೀಪದಲ್ಲೇ ಸಿಎನ್ಜಿ ಬಂಕ್ ಇಲ್ಲದೆ, ಸಿಎನ್ಜಿ ಆಧಾರಿತ ಆಟೋ ರಿಕ್ಷಾ ಖರೀದಿ ಮಾಡಿದವರು ಪಶ್ಚಾತ್ತಾಪಪಡುತ್ತಿದ್ದಾರೆ. ಈಗಾಗಲೇ ಆಟೋ ರಿಕ್ಷಾ ಚಾಲಕ, ಮಾಲೀಕರು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಮೇ ತಿಂಗಳಲ್ಲಿ ಸಿಎನ್ಜಿ ಕೊರತೆ ಆಗಿ ಸಿಎನ್ಜಿ ಬಂಕ್ನಲ್ಲಿ ದಿನಗಟ್ಟಲೆ ಬಾಡಿಗೆ ಇಲ್ಲದೆ ರಿಕ್ಷಾದವರು ಒದ್ದಾಡಿರುವುದು ಯಾರೂ ಮರೆಯುವಂತಿಲ್ಲ.
ಸಿಎನ್ಜಿ ಆಧಾರಿತ ಆಟೋ ರಿಕ್ಷಾಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸಿಎನ್ಜಿ ಬೈಕ್ಗಳು ಹೆಚ್ಚೆಚ್ಚು ರಸ್ತೆಗಿಳಿಯುತ್ತಿವೆ. ಆದರೆ ಸಿಎನ್ಜಿ ಬಂಕ್ಗಳು ಕೆಲವು ಪ್ರದೇಶಗಳಲ್ಲಿ ಮಾತ್ರ ಇರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಸಿಎನ್ಜಿ ವಾಹನಗಳ ಪ್ರಮಾಣದಲ್ಲಿ ಸಿಎನ್ಜಿ ಇಂಧನ ಸ್ಟೇಷನ್ಗಳು ಸ್ಥಾಪನೆಯಾಗುತ್ತಿಲ್ಲ. ಜತೆಗೆ ಅಷ್ಟೇ ಪ್ರಮಾಣದಲ್ಲಿ ಸಿಎನ್ಜಿ ಇಂಧನ ಕೂಡ ಪೂರೈಕೆಯಾಗುತ್ತಿಲ್ಲ. ಸಿಎನ್ಜಿ ಸಮಸ್ಯೆಯಿಂದ ವಾಹನ ಸವಾರರು ಕಷ್ಟ ಪಡುವಂತಾಗಿದೆ. -ಉದಯ ಖಾರ್ವಿ ಸಿಎನ್ಜಿ ರಿಕ್ಷಾ ಚಾಲಕ https://www.vijayavani.net/the-worship-of-art-is-commendable https://www.vijayavani.net/kumaravyasa-is-the-greatest-poet-the-country-has-ever-seen