ಬಸ್‌ಗಳ ಕೊರತೆ ಪ್ರಯಾಣಿಕರ ಪರದಾಟ

dvd bus shortage
ದೇವದುರ್ಗದ ಬಸ್ ಡಿಪೋದಲ್ಲಿ ಸಮಾವೇಶಕ್ಕೆ ಕಾಯ್ದಿರಿಸಿದ ಬಸ್‌ಗಳು. ಬಸ್‌ಗಾಗಿ ಕಾದು ಕುಳಿತಿರುವ ಪ್ರಯಾಣಿಕರು. 
Published on

ದೇವದುರ್ಗ: ಹೊಸಪೇಟೆಯಲ್ಲಿ ರಾಜ್ಯ ಸರ್ಕಾರ ಆಯೋಜಿಸಿರುವ ಸಮರ್ಪಣೆ ಸಂಕಲ್ಪ ಸಮಾವೇಶಕ್ಕೆ ಹೆಚ್ಚುವರಿ ಬಸ್ ಕಾಯ್ದಿರಿಸಿದ ಕಾರಣ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡಿದರು.

ಬೆಳಗ್ಗೆಯಿಂದ ನಿಗದಿತ ಮಾರ್ಗದ ಬಸ್‌ಗಳು ಹೊರತುಪಡಿಸಿ ಹೆಚ್ಚುವರಿ ಬಸ್‌ಗಳ ಸೇವೆ ಸ್ಥಗಿತ ಮಾಡಲಾಗಿದೆ. ಮಾಹಿತಿ ಇಲ್ಲದೆ ಪಟ್ಟಣಕ್ಕೆ ಬಂದಿದ್ದ ಗ್ರಾಮೀಣ ಭಾಗದ ಜನರು ಬಸ್ ಇಲ್ಲದೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕಾದು ಕುಳಿತಿದ್ದರು.

ಡಿಪೋ ಕಂಟ್ರೋಲ್ ರೂಮ್‌ನಿಂದ ಬಸ್‌ಗಳ ಸೇವೆ ಇರುವುದಿಲ್ಲ, ಪ್ರಯಾಣಿಕರು ಸಹಕರಿಸಬೇಕೆಂದು ಮೈಕ್ ಮೂಲಕ ಪ್ರಕಟಿಸಲಾಯಿತು. ಆದರೂ ಗ್ರಾಮೀಣ ಭಾಗದ ಪ್ರಯಾಣಿಕರು ಬಸ್‌ಗಾಗಿ ಕಾದು ಸುಸ್ತಾದರು.

ಹಲವರು ಖಾಸಗಿ ವಾಹನಗಳಲ್ಲಿ ಪ್ರಯಾಣ ಬೆಳೆಸಿದರೆ, ಇನ್ನು ಕೆಲವರು ಬಸ್ ನಿಲ್ದಾಣದಲ್ಲಿ ಕಾಲ ಕಳೆದರು. ಬಸ್‌ಗಳ ಕೊರತೆಯಿಂದ ಪ್ರಯಾಣಿಕರು ಸಮಸ್ಯೆ ಎದುರಿಸಿ, ಸರ್ಕಾರ ಹಾಗೂ ಸಾರಿಗೆ ಸಂಸ್ಥೆಗೆ ಹಿಡಿಶಾಪ ಹಾಕುತ್ತಿರುವುದು ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net