ಅತಿಸಣ್ಣ ಕಥೆ, ಲಲಿತ ಪ್ರಬಂಧ ಸ್ಪರ್ಧೆ

essy
Published on

ಬಂಟ್ವಾಳ: ಸಾಹಿತಿ, ಸಂಘಟಕ ಬಿ.ತಮ್ಮಯ್ಯ ಸ್ಮರಣಾರ್ಥ ರಾಜ್ಯಮಟ್ಟದ ಅತಿಸಣ್ಣ ಕಥೆ ಹಾಗೂ ಲಲಿತ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. 250 ಪದಮಿತಿಯಲ್ಲಿ ಕಥೆ ಬರೆದು ಕಳುಹಿಸಬೇಕು. ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಆಯ್ಕೆಯ ಯಾವುದಾದರೂ ಒಂದು ವಿಷಯದ ಮೇಲೆ 5 ಪುಟ ಮೀರದಂತೆ ಲಲಿತ ಪ್ರಬಂಧ ಬರೆದು ಕಳುಹಿಸಬಹುದು. ಬರಹಗಳು ಸ್ವಂತ ರಚನೆಯಾಗಿದ್ದು, ಎಲ್ಲಿಯೂ ಪ್ರಕಟಗೊಂಡಿರಬಾರದು. ಬರಹಗಳನ್ನು ನುಡಿ ಅಥವಾ ಯುನಿಕೋಡ್‌ನಲ್ಲಿ 12 ಫಾಂಟ್‌ನಲ್ಲಿ ಬರೆಯಬೇಕು. ಬರಹಗಾರರಿಗೆ ಯಾವುದೇ ವಯಸ್ಸಿನ ಮಿತಿ ಇಲ್ಲ. ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ ಡಿಸೆಂಬರ್ 10ರ ಮುಂಚಿತವಾಗಿ, ದಿನೇಶ್ ಸುವರ್ಣ ರಾಯಿ, ಅಧ್ಯಕ್ಷರು, ಯುವವಾಹಿನಿ ರಿ. ಬಂಟ್ವಾಳ ತಾಲೂಕು ಘಟಕ, ಸುವರ್ಣ ಕೇದಗೆ ರಾಯಿ, ರಾಯಿ ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು 574211 ಇಲ್ಲಿಗೆ ಅಂಚೆ ಮೂಲಕ ಅಥವಾ ಇಮೇಲ್ yuvavahinibantwal@gmail.com ಗೆ ಕಳುಹಿಸಿಕೊಡಲು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net