–ಚುಟುಕು ಸಾಹಿತ್ಯದಲ್ಲಿದೆ ಪರಿಣಾಮಕಾರಿ ಸಂದೇಶ

4 MANVI 01
ಮಾನ್ವಿ ತಾಪಂ ಭವನದಲ್ಲಿ ಆಯೋಜಿಸಿದ್ದ ಚುಟುಕು ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಮಾತನಾಡಿದರು. ತಾಲೂಕು ಅಧ್ಯಕ್ಷ ಮಹ್ಮದ್ ಮುಜೀಬ್, ಕಾರ್ಯದರ್ಶಿ ರವಿಶರ್ಮ, ಪುರಸಭೆ ಸದಸ್ಯ ರಾಜಾ ಮಹೇಂದ್ರನಾಯಕ, ಸುರೇಶಕುರ್ಡಿ ಇದ್ದರು.
Published on

ಮಾನ್ವಿ: ಚುಟುಕು ಸಾಹಿತ್ಯ ನಮ್ಮ ಬದುಕಿಗೆ ಬೆಳಕು ನೀಡುತ್ತದೆ ಎಂದು ಸಾಹಿತಿ ಆನಂದ ಜೂಕುರು ಹೇಳಿದರು.

ಪಟ್ಟಣದ ತಾಪಂ ಭವನದಲ್ಲಿ ಹಮ್ಮಿಕೊಂಡ ಚುಟುಕು ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

ಕಲುಷಿತ ಸಮಾಜದಲ್ಲಿ ನಾವು ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು. ದ್ವೇಷ ಬೀಡಬೇಕು. ಚುಟುಕುಗಳಲ್ಲಿ ಪದಗಳು ಕೆಲವೆ ಇದ್ದರು ಕೂಡ ಅತ್ಯಂತ ಮಾರ್ಮಿಕವಾಗಿರುತ್ತವೆ. ಸಾಮಾಜಿಕ ಸಂದೇಶಗಳನ್ನು ಪರಿಣಾಮಕಾರಿಯಾಗಿ ಹೇಳುತ್ತವೆ. ಮಹಿಳೆಯರಿಗೆ ಗೌರವ ನೀಡುವುದು, ತಂದೆ-ತಾಯಿಗಳನ್ನು ಅನಾಥ ಆಶ್ರಮಕ್ಕೆ ಬೀಡದೆ, ಅವರನ್ನ ಚನ್ನಾಗಿ ನೋಡಿಕೊಳ್ಳಿ. ಅವರಿಂದ ನಾವು ಎಷ್ಟೇಲ್ಲ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಬೇಕು ಎಂದರು.

ನಿಕಟ ಪೂರ್ವ ಕಸಾಪ ಜಿಲ್ಲಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಚುಟುಕು ಸಾಹಿತ್ಯಕ್ಕೆ ವಿಶಿಷ್ಟವಾದ ಸ್ಥಾನವಿದೆ. ಒಂದು ಕಥೆ ಹೇಳದನ್ನ ಕವಿತೆ ಹೇಳುತ್ತದೆ. ಕವಿತೆ ಹೇಳುವುದನ್ನ ಕೆಲವು ಸಾಲುಗಳಲ್ಲಿ ಚುಟುಕು ಹೇಳುತ್ತದೆ ಚುಟುಕುಗಳನ್ನು ಸುಲಭವಾಗಿ ಪ್ರತಿಯೊಬ್ಬರು ಬರೆಯಬಹುದಾದ ಸರಳ ಸಾಹಿತ್ಯ ಪ್ರಕಾರವಾಗಿದೆ ಎಂದರು.

ಜಿಲ್ಲಾಧ್ಯಕ್ಷ ನರಸಿಂಗ್‌ರಾವ್ ಸರ್ಕಿಲ್ ತಾಲೂಕು ಘಟಕದ ಪದಾದಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು. ಚುಟುಕು ಕವಿ ಗೋಷ್ಠಿಯಲ್ಲಿ ತಾಲೂಕಿನ ವಿವಿಧ ಕವಿಗಳು ಚುಟುಕು ಕವಿತೆಗಳನ್ನು ಓದಿದರು. ನಿವೃತ್ತ ಪಿಎಸ್‌ಐ ವೀರನಗೌಡ ಕರಡಿಗುಡ್ಡ, ಮಾಜಿ ಯೋಧರ ಸಂಘದ ಜಿಲ್ಲಾಧ್ಯಕ್ಷ ಚನ್ನರೆಡ್ಡಿ, ಪ್ರಮುಖರಾದ ಮೌನೇಶ್ ಪೋತ್ನಾಳ, ಸುಬಾನ್‌ಬೇಗ್, ಹನುಮಂತ ಕೋಟೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು.

ಚುಸಾಪ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಭೋಗವತಿ, ಕಾರ್ಯದರ್ಶಿ ರವಿಶರ್ಮ, ಪ್ರಮುಖರಾದ ಬಸವರಾಜ ಬ್ಯಾಗವಾಟ, ಬಾಗಯ್ಯ ನಾಯಕ, ಮಹಾದೇವಪ್ಪ, ಎಂ.ಆರ್. ಸಂಗಮೇಶ ಮುಧೋಳ, ಮೂಕಪ್ಪ ಕಟ್ಟಿಮನಿ, ಮಧುಪಾಂಡೆ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net