

ಸಂಡೂರು: ತಾಲೂಕಿನ ತೋರಣಗಲ್‌ನ ಹೊರವಲಯದ ಆಟೋ ಮೊಬೈಲ್ ಶಾಪ್, ಎಲೆಕ್ಟ್ರೆಕಲ್ ಶಾಪ್, ಹೊಟೇಲ್ ಸೇರಿದಂತೆ ಒಟ್ಟು 3 ಅಂಗಡಿಗಳಿಗೆ ಬೆಂಕಿ ತಗುಲಿದ ಪರಿಣಾಮ ಅಂಗಡಿಗಳಲ್ಲಿದ್ದ ಎಲ್ಲಾ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಮಂಗಳವಾರ ಜರುಗಿದೆ. ಜಾವೀದ್(ಮಹಮದ್ ಇಕ್ಬಾಲ್) ಅವರ ಆಟೋ ಮೊಬೈಲ್ ಶಾಪ್, ಸೋನು ಅವರ ಎಲೆಕ್ಟ್ರೆಕಲ್ ಶಾಪ್‌ನಲ್ಲಿದ್ದ 6ಬ್ಯಾಟರಿಗಳು ಇತರೆ ವಿದ್ಯುತ್ ಪರಿಕರಗಳು, ದಿನೇಶ್ ಅವರ ಹೊಟೇಲ್‌ನಲ್ಲಿದ್ದ ಫ್ರೀಜ್, ಟೇಬಲ್, ಚೇರ್, ಆಡುಗೆ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.