ಕಿರು ನಾಟಕ ಸ್ಪರ್ಧೆ 16ರಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪವು ಅ. 16ರಂದು ಮಧ್ಯಾಹ್ನ 3 ಗಂಟೆಗೆ ಮಹಿಳೆಯರಿಗಾಗಿ ಕಿರುನಾಟಕ ಸ್ಪರ್ಧೆ ಆಯೋಜಿಸಿದೆ.
ಸ್ಪರ್ಧೆಯು ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಡೆಯಲಿದ್ದು, ಮೊದಲು ನೊಂದಾಯಿತ 8 ತಂಡಗಳಿಗೆ ಅವಕಾಶ ನೀಡಲಾಗುವುದು. ಕಿರು ನಾಟಕದ ವಿಷಯ ಸ್ತ್ರೀ. ಒಂದು ತಂಡದಲ್ಲಿ ಕನಿಷ್ಠ ಇಬ್ಬರು, ಗರಿಷ್ಠ 6 ಜನರಿರಬೇಕು. ಆಸಕ್ತರು ಕಚೇರಿಯಲ್ಲಿ ಹೆಸರು ನೋಂದಾಯಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net