

ಬೊಮ್ಮನಹಳ್ಳಿ: ಕಾರೊಂದರಲ್ಲಿ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡು, ಕಾರು ಹೊತ್ತಿ ಉರಿದಿದ್ದು, ಒಳಗಿದ್ದವರು ತಮ್ಮ ಸಮಯಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೊಮ್ಮನಹಳ್ಳಿಯ ಎಚ್.ಎಸ್.ಆರ್. ಬಿಡಿಎ ಕಾಂಪ್ಲೆಕ್ಸ್ ಬಳಿ ಬುಧವಾರ ಈ ಅವಘಡ ಸಂಭವಿಸಿದೆ.
ಕಾರನ್ನು ಪಾರ್ಕ್ ಮಾಡಲಾಗಿದ್ದು, ಕಾರಿನಲ್ಲಿದ್ದವರು ಇನ್ನೂ ಒಳಗಿರುವಾಗಲೇ ಬೆಂಕಿ ಹೊತ್ತಿಕೊಂಡಿದೆ. ಸುಟ್ಟ ವಾಸನೆ ಬಂದಿದ್ದರಿಂದ ಒಳಗಿದ್ದವರು ತಕ್ಷಣ ಹೊರಗೆ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಾರ್ಟ್ ಸರ್ಕ್ಯೂಟ್ನಿಂದಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕಾರು ಹೊತ್ತಿ ಉರಿಯುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ನೀರು ಹಾಕಿ ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಸಂಭಾವ್ಯ ಹೆಚ್ಚಿನ ಹಾನಿ ಹಾಗೂ ಅಪಾಯ ತಪ್ಪಿಹೋದಂತಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ