ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ

Fire
Published on

ಕೋಟ: ಪಾಂಡೇಶ್ವರ ಗ್ರಾಮಪಂಚಾಯಿತಿ ವ್ಯಾಪ್ತಿಯ ರಕ್ತೇಶ್ವರಿ ದೇವಳ ಸಮೀಪವಿರುವ ಜ್ಯೋತಿ ಎಂಬುವರ ಮನೆಗೆ ಶುಕ್ರವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದೆ. ಆಕಸ್ಮಿಕ ಶಾಟ್9 ಸರ್ಕ್ಯೂಟ್‌ಗೆ ಆಹುತಿ ಪಡೆದಿದೆ. ಮನೆಯಲ್ಲಿ ತಾಯಿ ಹಾಗೂ ಮಗ ಮಾತ್ರ ವಾಸಿಸುತ್ತಿದ್ದು, ಘಟನೆ ವೇಳೆ ಮಗ ಶಾಲೆಗೆ ತೆರಳಿದ್ದ ತಾಯಿ ಸ್ಥಳೀಯ ಕಾರ್ಖಾನೆಯೊಂದಕ್ಕೆ ಕೆಲಸಕ್ಕೆ ತೆರಳಿದ್ದರೆನ್ನಲಾಗಿದೆ. ಸ್ಥಳೀಯರು ಬೆಂಕಿ ನಂದಿಸಿದರೂ, ಮನೆಯಲ್ಲಿದ್ದ ವಿದ್ಯುನ್ಮಾನ ಉಪಕರಣಗಳು ಸುಟ್ಟುಹೋಗಿವೆ. ಸ್ಥಳಕ್ಕೆ ಗ್ರಾಪಂ ಅಧ್ಯಕ್ಷೆ ಕಲ್ಪನಾ ದಿನಕರ್, ಸದಸ್ಯರಾದ ಪ್ರತಾಪ್ ಶೆಟ್ಟಿ, ಚಂದ್ರಮೋಹನ್, ವೈಬಿ ರಾಘವೇಂದ್ರ, ರವೀಶ್, ಸಂಧ್ಯಾ ರಾವ್, ಪಾಂಡೇಶ್ವರ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್,ನಾರಾಯಣ ಆಚಾರ್ಯ, ಗ್ರಾಮಲೆಕ್ಕಿಗ ವಿಜಯ್ ಕುಮಾರ್, ಅಗ್ನಿಶಾಮಕ ದಳದ ಅಧಿಕಾರಿಗಳಾದ ಬಾಬು ಶೆಟ್ಟಿ, ಕೆ.ಟಿ ಗೌಡ, ಸುಂದರ್, ನಾಗರಾಜ ಪೂಜಾರಿ, ಚಂದ್ರಕಾಂತ್, ಬಸವರಾಜ್ ಭೇಟಿ ನೀಡಿ ಪರಿಶೀಲಿಸಿದರು.

ಕೋಟ.ಮಾ18 ಬೆಂಕಿ ಆಹುತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net