ಕಿರು ಸೇತುವೆ, ಸ್ವಾಗತ ದ್ವಾರ ಲೋಕಾರ್ಪಣೆ

New Project (26)
Published on

ಮೂಡುಬಿದಿರೆ: ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನ ಮುಂಭಾಗದಲ್ಲಿ ಸಂಪರ್ಕ ಕಲ್ಪಿಸುವ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಿರು ಸೇತುವೆ ಮತ್ತು ಸ್ವಾಗತ ದ್ವಾರವನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ಲೋಕಾರ್ಪಣೆಗೊಳಿಸಿದರು.

ದೇಗುಲದ ಆನುವಂಶಿಕ ಆಡಳಿತ ಮೊಕ್ತೇಸರ ಕುಲದೀಪ ಎಂ., ಪ್ರಧಾನ ಅರ್ಚಕ ಪಿ.ಅನಂತಕೃಷ್ಣ ಭಟ್, ಸಂಪಿಗೆ ಚರ್ಚ್ ಧರ್ಮಗುರು ವಿನ್ಸೆಂಟ್, ದಾನಿ ಮುಗ್ರೋಡಿ ಸುಧಾಕರ ಶೆಟ್ಟಿ, ದ.ಕ. ಸಹಕಾರಿ ಹಾಲು ಒಕ್ಕೂಟ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಡಾ.ಯೋಗಿ ಸುಧಾಕರ ತಂತ್ರಿ, ಪುತ್ತಿಗೆ ಗ್ರಾಪಂ ಸದಸ್ಯರಾದ ದಿನೇಶ್ ಗೌಡ, ಸಾರಿಕಾ, ಅಪ್ಪಿ, ಸುಮಾ ಭಟ್, ಮಾಜಿ ಸದಸ್ಯರಾದ ನಾಗವರ್ಮ ಜೈನ್, ನಾಗರಾಜ ಕರ್ಕೇರ, ಕಾಯರಬೆಟ್ಟು ಶಂಕರ ಮೂರ್ತಿ, ರಂಜಿತ್ ಪೂಜಾರಿ ತೋಡಾರು, ಉದಯ ಶೆಟ್ಟಿ ಕೊಡ್ಯಡ್ಕ, ಶಶಿಧರ ಅಂಚನ್ ಎನಿಕ್ರಿಪಲ್ಲ ಮತ್ತಿತರರಿದ್ದರು.

ಸೇತುವೆ ನಿರ್ಮಾಣವಾದಲ್ಲಿ ರಿಚಾರ್ಡ್ ಅವರು ಬಿಟ್ಟುಕೊಟ್ಟ 19 ಸೆಂಟ್ಸ್ ಜಾಗಕ್ಕೆ ಬದಲಿಯಾಗಿ ನಾಗವರ್ಮ ಜೈನ್ ಅವರು ಅಷ್ಟೇ ಜಾಗವನ್ನು ಸೂಕ್ತ ದಾಖಲೆ ಪತ್ರಗಳೊಂದಿಗೆ ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net