ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ 12,500 ರೂ. ದಂಡ

IMG-20230728-WA0030.jpg
Published on


ಬೆಳಗಾವಿ: ನಗರದಲ್ಲಿ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ  ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ನೇತೃತ್ವದಲ್ಲಿ ಪಾಲಿಕೆಯ ಆರೋಗ್ಯ ಸಮಿತಿ ಸದಸ್ಯರು, ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದರು.
ನಗರದ ಖಡಬೇಜಾರ, ಗಣಪತಿ ಗಲ್ಲಿ, ಶಹಾಪುರ, ವಡಗಾಂವ ಸೇರಿದಂತೆ ವಿವಿಧ ಕಡೆ ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳು ಸೇರಿದಂತೆ ಸುಮಾರು ೫೦ಕ್ಕೂ ಅಽಕ ಕಡೆ ದಾಳಿ ನಡೆಸಿ ಪಾಲಿಕೆ ಅಽಕಾರಿಗಳ ತಂಡ ನಿಷೇಽತ ಪ್ಲಾಸ್ಟಿಕ್ ವಶಪಡಿಸಿಕೊಂಡು ಬಟ್ಟೆಗಳ ಅಂಗಡಿಗಳನ್ನು ಸೀಜ್ ಮಾಡಿ ೧೨,೫೦೦ ರೂ. ದಂಡ ವಿಧಿಸಿದರು.
ಈಗಾಗಲೇ ಪ್ಲಾಸ್ಟಿಕ್ ಮುಕ್ತ ಅಭಿಯಾನದ ಅಂಗವಾಗಿ ನಗರದ ಏಕಬಳಕೆಯ ಪ್ಲಾಸ್ಟಿಕ್ ಲೋಟ, ಚಮಚ, ಕ್ಯಾರಿಬ್ಯಾಗ್, ಊಟದ ತಟ್ಟೆ, ಹಾನಿ ಇನ್ನಿತರ ಬ್ಯಾಗಗಳನ್ನು ಮಾರಾಟ, ಬಳಕೆ ಮಾಡದಂತೆ ಜನರಲ್ಲಿ ನಿರಂತರ ಜಾಗೃತಿ ಮೂಡಿಸಿಕೊಂಡು ಬರಲಾಗುತ್ತಿದೆ. ಆದರೂ, ಕೆಲ ಅಂಗಡಿಕಾರರು ನಿಯಮ ಉಲ್ಲಂಘಿಸಿ ನಿಷೇಽತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ನಿರಂತರವಾಗಿ ತಿಳುವಳಿಕೆ ನೀಡಿದರು ಮಾರಾಟ ಮುಂದುವರಿಸಿದ್ದರು. ಹಾಗಾಗಿ ಬಟ್ಟೆ ಅಂಗಡಿಗಳನ್ನು ಸೀಜ್ ಮಾಡಿ ಕೇಸ್ ದಾಖಲು ಮಾಡಲಾಗಿದೆ ಎಂದು ಪಾಲಿಕೆ ಆರೋಗ್ಯ ವಿಭಾಗದ ಅಽಕಾರಿಗಳು ತಿಳಿಸಿದ್ದಾರೆ.
 ಪಾಲಿಕೆ ಅಽಕಾರಿಗಳಾದ ಆದಿಲ್ ಖಾನ್, ಸಂತೋಷ ಕುರಬೇಟ, ಎಸ್.ಸುಶೀಲಾ, ಎಂ. ಸಾಽಕ, ಕೆ. ಶೀತಲ್  ಇತರರಿದ್ದರು.
........

ಕೋಟ್ಸ್
ನಗರದಲ್ಲಿ ನಿಷೇಽತ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣ ನಿಷೇಽಸಲಾಗಿದೆ. ನಿಯಮ ಉಲ್ಲಂಘಿಸಿ ಯಾರಾದರ ನಿಷೇಽಕ ಪ್ಲಾಸ್ಟಿಕ್ ಮಾರಾಟ ಮಾಡುವುಡು ಕಂದು ಅಂತಹ ಅಂಗಡಿಕಾರರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲು ಸೂಚನೆ ನೀಡಲಾಗಿದೆ.
- ಅಶೋಕ ದುಡಗುಂಟಿ,  ಮಹಾನಗರ ಪಾಲಿಕೆ ಆಯುಕ್ತ.
............

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net