ವರಮಹಾಲಕ್ಷ್ಮೀ ಪೂಜೆ, ಖರೀದಿ ಜೋರು

LXR VARAMAHALAXMI
Published on

ಲಕ್ಷೆ್ಮೕಶ್ವರ: ಶ್ರಾವಣ ಮಾಸದ 2ನೇ ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿಸುವ ವರಮಹಾಲಕ್ಷ್ಮೀ ದೇವಿ ಪೂಜೆಯ ಪೂರ್ವ ಸಿದ್ಧತೆಗಾಗಿ ಗುರುವಾರ ಪಟ್ಟಣದ ಮಾರುಕಟ್ಟೆಯಲ್ಲಿ ಲಕ್ಷ್ಮೀ ಮೂರ್ತಿ, ಹೂವು, ಹಣ್ಣು, ಪೂಜಾ ಸಾಮಗ್ರಿ ಮತ್ತು ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ಮಹಿಳೆಯರು ತೊಡಗಿರುವುದು ಕಂಡು ಬಂದಿತು.

ಹಣ್ಣುಗಳ ವ್ಯಾಪಾರಸ್ಥರು ಬಾಳೆ, ಸೇಬು, ಕಿತ್ತಳೆ, ಚಿಕ್ಕು, ಮೋಸಂಬಿ ಸೇರಿ ಐದು ಬಗೆಯ ಹಣ್ಣುಗಳ ಸೆಟ್ ಮಾಡಿ 150 ರೂ.ಗಳಿಂದ 200 ರೂ.ಗಳವರೆಗೆ ಮಾರಾಟ ಮಾಡಿದರು. 50 ರೂ.ಗಳಿಗೆ 2 ಬಾಳೆ ಕಂಬ ಮಾರಾಟ ಮಾಡಿದರು.

ದಿನಸಿ, ಅಲಂಕಾರಿಕ ವಸ್ತುಗಳು, ವೀಳ್ಯದೆಲೆ, ಹೂವು, ಬಾಳೆ, ಕಬ್ಬುಗಳ ಬೆಲೆಯಲ್ಲೂ ಹೆಚ್ಚಳ ಕಂಡು ಬಂದಿತು.

ಸಂಪತ್ತಿನ ಅಧಿದೇವತೆ ವರಮಹಾಲಕ್ಷ್ಮೀ ಮೂರ್ತಿ ಸೇರಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡು ಬಂತು. ಮುಖ್ಯ ಮಾರುಕಟ್ಟೆ ಮುಂದುವರಿದ ಭಾಗದಲ್ಲಿ ದುರಸ್ತಿ ಕಾರ್ಯ ನಡೆದಿದ್ದರಿಂದ ಮತ್ತು ಹಬ್ಬದ ಖರೀದಿಯಿಂದ ಇಡೀ ದಿನ ಮಾರ್ಕೆಟ್ ರಸ್ತೆ ಜನರಿಂದ ತುಂಬಿಕೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net