

ದಾಬಸ್ಪೇಟೆ: ಸೋಂಪುರ ಹೋಬಳಿಯ ನರಸೀಪುರದಲ್ಲಿ ಅಂಗಡಿಯ ಶೆಟರ್ ಮುರಿದು ಹಣ ಹಾಗೂ ಸಿಸಿ ಕ್ಯಾಮರಾ ಕಳ್ಳತನ ಮಾಡಿದ್ದಾರೆ. ಸಾರ್ವಜನಿಕರ ಮಾಹಿತಿ ಮೇರೆಗೆ ಮಾಲೀಕ ನಾರಾಯಣಗೌಡ ಸ್ಥಳಕ್ಕೆ ಬಂದಾಗ ಕಳವು ಮಾಡಿರುವುದು ತಿಳಿದು ಬಂದಿದೆ. ದಾಬಸ್ಪೇಟೆ ಪೊಲೀಸರು ಸ್ಥಳ ಪರಿಶೀಲಿಸಿ, ಅಕ್ಕಪಕ್ಕದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕಳ್ಳರು ಮುಖ ಮುಚ್ಚಿಕೊಂಡು ಬಿಳಿ ಬಣ್ಣದ ಸ್ಕೂಟರ್ನಲ್ಲಿ ಆಗಮಿಸಿರುವುದು ಕಂಡುಬಂದಿದೆ. ದಾಬಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಬಸ್ಪೇಟೆ: ಕೌಟುಂಬಿಕ ಜೀವನದಲ್ಲಿನ ಏರುಪೇರಿಗೆ ಮನನೊಂದು ಗೃಹಿಣಿಯೊಬ್ಬರು ಗುರುವಾರ ದೇವರಹೊಸಹಳ್ಳಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರು ತಾಲೂಕಿನ ಭೀಮಸಂದ್ರದ ನಿವಾಸಿ ಪ್ರಮೀಳಾ (49) ಮೃತ. ಇಲ್ಲಿನ ಭದ್ರಕಾಳಿ&ವೀರಭದ್ರೇಶ್ವರ ದೇವಾಸ್ಥಾನ ಭಕ್ತೆಯಾಗಿದ್ದ ಪ್ರಮೀಳಾ ಗುರುವಾರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಮೀಪದಲ್ಲಿದ್ದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಗೆ ಇತ್ತೀಚೆಗೆ ಅನಾರೋಗ್ಯ ಉಂಟಾಗಿತ್ತು. ಪುತ್ರಿ ಪ್ರೀತಿಸಿ ಮದುವೆಯಾಗಿದ್ದರೆ, ಪುತ್ರ ಮದ್ಯ ವ್ಯಸನಿಯಾಗಿದ್ದ ಎನ್ನಲಾಗಿದ್ದು, ಈ ಎಲ್ಲದರಿಂದ ಬೇಸರಗೊಂಡಿದ್ದೆ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ದಾಬಸ್ಪೇಟೆ ಪೊಲೀಸರು ಕೆರೆಯಿಂದ ಮೃತದೇಹ ಹೊರತೆಗೆದು ಮರಣೋತ್ತರ ಪರೀೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ದಾಬಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಬಸ್ಪೇಟೆ: ಸಾಲ ತೀರಿಸಲಾಗದೆ ಮನನೊಂದು ಯುವಕನೊಬ್ಬ ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಾಬಸ್ಪೇಟೆ ಜಯರಾಮು ಬಡಾವಣೆ ನಿವಾಸಿ ಚೇತನ್ (28) ಮೃತ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನ್, 4&5 ತಿಂಗಳಿಂದ ಕೆಲಸ ಬಿಟ್ಟಿದ್ದ.ಸುಮಾರು ಒಂದೂವರೆ ಲ ಸಾಲ ಪಡೆದಿದ್ದ ಎನ್ನಲಾಗಿದ್ದು, ಸಾಲ ತೀರಿಸಲಾಗದೆ ಮನನೊಂದು ಅ.23ರಂದು ರಾತ್ರಿ ಮನೆಯಲ್ಲೇ ್ಯಾನಿಗೆ ಸೀರೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾಬಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.