ಅಂಗಡಿ ಶಟರ್ಸ್ ಮುರಿದು ಕಳವು

crime
Published on

ಹುಬ್ಬಳ್ಳಿ: ಇಲ್ಲಿಯ ಎಪಿಎಂಸಿ ಯಾರ್ಡ್‌ನ ಜೆ.ಕೆ. ಟ್ರೇಡರ್ಸ್ ಅಂಗಡಿಯ ಶಟರ್ಸ್ ಮುರಿದ ಕಳ್ಳರು, 72 ಸಾವಿರ ರೂ. ನಗದು, 85 ಸಾವಿರ ರೂ. ಮೌಲ್ಯದ 6 ಸಿಸಿ ಕ್ಯಾಮರಾ, ಮಾನಿಟರ್, ಕಂಪ್ಯೂಟರ್ ಕಳವು ಮಾಡಿದ್ದಾರೆ.

ಕೇವಲಚಂದ ಸೋಳಂಕಿ ಎಂಬುವರಿಗೆ ಸೇರಿದ ಅಂಗಡಿಯಲ್ಲಿ ಮೇ 23ರಂದು ರಾತ್ರಿ ಕಳವಾಗಿದೆ. ನವನಗರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net